ಚೆನ್ನೈ: ಐಐಟಿ ಮದ್ರಾಸ್ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ದೇಶದ ಮೊದಲ 5ಜಿ ಕರೆಯನ್ನು ಪರೀಕ್ಷಿಸಲಾಯಿತು. ಇದರ ಸಂಪೂರ್ಣ ನೆಟ್ವರ್ಕ್ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಕೇಂದ್ರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಾಯೋಗಿಕವಾಗಿ ಗುರುವಾರ ಮೊದಲ 5 ಜಿ ಕರೆಯನ್ನು ಪರೀಕ್ಷೆಗ ಒಳಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ವೈಷ್ಣವ್, ” ಐಐಟಿ ಮದ್ರಾಸ್ನಲ್ಲಿ ಆತ್ಮನಿರ್ಭರ 5G ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದರ ಸಂಪೂರ್ಣ ಎಂಡ್-ಟು-ಎಂಡ್ ನೆಟ್ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಧಾನಿಯವರ ದೂರದೃಷ್ಟಿಯ ಸಾಕಾರವಾಗಿದೆ. ಸ್ವಂತವಾಗಿ 4G ಮತ್ತು 5G ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿಪಡಿಸುವುದು, ಪ್ರಪಂಚಕ್ಕಾಗಿ ಭಾರತದಲ್ಲಿ ತಯಾರಿಸುವುದು ಮೋದಿ ಗುರಿ. ಈ ಹೊಸ ತಂತ್ರಜ್ಞಾನದಿಂದ ನಾವು ಜಗತ್ತನ್ನು ಗೆಲ್ಲಬೇಕು”ಎಂದಿದ್ದಾರೆ.
ಐಐಟಿ ಮದ್ರಾಸ್ ನೇತೃತ್ವದ ಒಟ್ಟು ಎಂಟು ಸಂಸ್ಥೆಗಳು ಬಹು-ಸಂಸ್ಥೆಗಳ ಸಹಯೋಗದ ಯೋಜನೆಯಾಗಿ ಅಭಿವೃದ್ಧಿಪಡಿಸಿದ 5G ಟೆಸ್ಟ್ ಬೆಡ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಾರ, ಈ ಯೋಜನೆಯನ್ನು 220 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟೆಸ್ಟ್ ಬೆಡ್ ಭಾರತೀಯ ಉದ್ಯಮ ಮತ್ತು ಸ್ಟಾರ್ಟ್ಅಪ್ಗಳಿಗೆ ಬೆಂಬಲ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ, ಇದು 5G ಮತ್ತು ಮುಂದಿನ-ಪೀಳಿಗೆಯ ತಂತ್ರಜ್ಞಾನಗಳಲ್ಲಿ ಅವರ ಉತ್ಪನ್ನಗಳು, ಮೂಲಮಾದರಿಗಳು, ಪರಿಹಾರಗಳನ್ನು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ.
भारत में विकसित 4G और 5G नेटवर्क, प्रधानमंत्री श्री @narendramodi जी के आत्मनिर्भर भारत के संकल्प को सिद्ध करने का प्रयास है। https://t.co/F3OO9vz6vr
— Ashwini Vaishnaw (@AshwiniVaishnaw) May 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.