ಬೆಂಗಳೂರು: ಉನ್ನತ ಶಿಕ್ಷಣ, ಐಟಿ, ಬಿಟಿ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಮತ್ತು ಕರ್ನಾಟಕ ಸರ್ಕಾರದ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಮುಖ್ಯ ಭಾಷಣಕಾರರಾಗಿ ಇಂದು ಲಂಡನ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಎಜುಕೇಶನಲ್ ಕಾನ್ಫರೆನ್ಸ್ನಲ್ಲಿ ಭಾಗವಹಿಸುತ್ತಿದ್ದಾರ.
ಅಲ್ಲಿ “21 ನೇ ಶತಮಾನದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿರ್ಮಿಸುವುದು” ಎಂಬ ಅಧಿವೇಶನದಲ್ಲಿ ಅವರು ಭಾರತದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅವಲೋಕನವನ್ನು 150 ರಾಷ್ಟ್ರಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚಿಸಲಿದ್ದಾರೆ.
Look forward to speaking and interacting with experts and professionals in Education sector in the UK.@isdc_global pic.twitter.com/860t3LqslY
— Dr. Ashwathnarayan C. N. (@drashwathcn) May 19, 2022
ದೇಶವಿರೋಧಿ ಜೆಎನ್ಯು ಎಡಚರರು ಮತ್ತು ಅವರ ಮಿತ್ರಪಡೆಗಳು ತಮ್ಮ ಟೂಲ್ಕಿಟ್ ಆಧಾರಿತ ಅಜೆಂಡಾದೊಂದಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆಯನ್ನು ಯಾವ ರೀತಿ ಹಾನಿಗೀಡು ಮಾಡಲು ಪ್ರಯತ್ನಿಸಿವೆ ಎಂಬುದನ್ನು ನಾವು ನೋಡುತ್ತಲೇ ಬಂದಿದ್ದೇವೆ.
ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ಚುನಾಯಿತ ಪ್ರತಿನಿಧಿಗಳ ಭೇಟಿ ಮತ್ತು ಪ್ರಪಂಚದಾದ್ಯಂತದ ದೇಶಗಳು ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುವುದು ಇವರುಗಳಿಗೆ ಸಹಿಸಲಾಗುತ್ತಿಲ್ಲ.
ಟೊಳ್ಳು ಸಿದ್ಧಾಂತದೊಂದಿಗೆ ಸುಳ್ಳು ಅಜೆಂಡಾವನ್ನು ಹೆಣೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಾಜ್ಯ ಮತ್ತು ರಾಷ್ಟ್ರದ ಬೆಳವಣಿಗೆಯನ್ನು ಸಾಕ್ಷೀಕರಿಸಲು ಕೆಲವು ದುಷ್ಕರ್ಮಿಗಳು/ಸುಳ್ಳು ಸುದ್ದಿ ಹಬ್ಬಿಸುವವರು ಗಾಢ ನಿದ್ದೆಯಿಂದ ಹೊರಬರಬೇಕಾದ ಅಗತ್ಯವಿದೆ.
ರಾಜ್ಯದೊಂದಿಗೆ ಸಹಯೋಗಗೊಳ್ಳಲು ಮತ್ತು ಈ ನಿಟ್ಟಿನಲ್ಲಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಕರ್ನಾಟಕ ಮತ್ತು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತನಾರಾಯಣ ಅವರು ಹಲವಾರು ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಆಕರ್ಷಿಸುತ್ತಿದ್ದಾಎಎ. ಆದರೆ ತರ್ಕಹೀನ ಎಡಪಂಥೀಯ ಮನಸ್ಥಿತಿಯಿಂದ ಕುರುಡರಾದ ಜನರು ಸಹಜವಾಗಿಯೇ ರಾಜ್ಯದ ಉನ್ನತ ಶಿಕ್ಷಣದ ಸಾಧನೆಗಳ ಬಗ್ಗೆ ಕೊಂಕು ಮಾತನಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿ ಅನ್ನು ರಾಷ್ಟ್ರೀಯ ಅಭಿವೃದ್ಧಿಯ ‘ಮಹಾಯಾನ’ ಎಂದು ಕರೆದಿದ್ದಾರೆ. ಒಂದು ರೀತಿಯಲ್ಲಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಮುಖ ಭಾಗವಾಗಿದೆ ಎಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಆರಂಭಿಸಲಾದ ಯೋಜನೆಗಳು ನವ ಭಾರತವನ್ನು ನಿರ್ಮಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಅಭಿಪ್ರಾಯಿಸಿದ್ದಾರೆ.
ಆದರೆ ಜೆಎನ್ಯು ಮತ್ತು ತುಕ್ಡೇ ಗ್ಯಾಂಗ್ಗೆ ಈ ಸಮಗ್ರ ಶಿಕ್ಷಣ ವ್ಯವಸ್ಥೆಯು ಶಿಕ್ಷಣ ವ್ಯವಸ್ಥೆಯ ಕೇಸರಿಕರಣವಾಗಿ ಕಂಡುಬರುತ್ತಿದೆ. ಬ್ರಿಟಿಷ್ ವಸಾಹತುಶಾಹಿಗಳು ಮತ್ತು ಮುಸ್ಲಿಂ ಆಕ್ರಮಣಕಾರರನ್ನು ವೈಭವೀಕರಿಸಿ ರಾಷ್ಟ್ರದ ಮಕ್ಕಳನ್ನು ಕತ್ತಲೆಯಲ್ಲಿಡುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿರುವ ಎಡಪಂಥೀಯ ಹಿಡಿತವನ್ನು ತಳಮಟ್ಟದಲ್ಲಿ ಬದಲಿಸಲಾಗುತ್ತಿದೆ ಎಂಬುದೇ ಎಡಚರರ ಭಯಕ್ಕೆ ಕಾರಣವಾಗಿದೆ. ಹೀಗಾಗಿ ರಾಷ್ಟ್ರದ ಬೆಳವಣಿಗೆ ಕುಂಠಿತವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.