ಮುಂಬಯಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಮುಂಬೈನ ಮಜಗಾಂವ್ ಡಾಕ್ಸ್ನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ನೌಕಾಪಡೆಯ ಎರಡು ಯುದ್ಧನೌಕೆ ‘ಸೂರತ್’ ಮತ್ತು ‘ಉದಯಗಿರಿʼಗೆ ಚಾಲನೆ ನೀಡಿದರು.
ಸ್ಥಳೀಯವಾಗಿ ನಿರ್ಮಿಸಲಾದ ಎರಡು ಯುದ್ಧನೌಕೆಗಳನ್ನು ಏಕಕಾಲದಲ್ಲಿ ಚಾಲನೆ ಮಾಡಿರುವುದು ಇದೇ ಮೊದಲು ಎಂದು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MDL) ಹೇಳಿದೆ.
MDL ಒಂದು ಪ್ರಧಾನ ಹಡಗು ಮತ್ತು ಜಲಾಂತರ್ಗಾಮಿ ನಿರ್ಮಾಣದ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾಗಿದೆ.
‘ಸೂರತ್’ ಪ್ರಾಜೆಕ್ಟ್ 15 ಬಿ ಡಿಸ್ಟ್ರಾಯರ್ಗಳ ನಾಲ್ಕನೇ ಹಡಗು. ಆಂಧ್ರಪ್ರದೇಶದ ಪರ್ವತ ಶ್ರೇಣಿಯ ಹೆಸರನ್ನು ಹೊಂದಿರುವ ‘ಉದಯಗಿರಿ’ ಪ್ರಾಜೆಕ್ಟ್ 17A ಫ್ರಿಗೇಟ್ಗಳ ಮೂರನೇ ಹಡಗು. ಇದು ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಮತ್ತು ಪ್ಲಾಟ್ಫಾರ್ಮ್ ನಿರ್ವಹಣಾ ವ್ಯವಸ್ಥೆಗಳೊಂದಿಗೆ P17 ಫ್ರಿಗೇಟ್ಗಳ (ಶಿವಾಲಿಕ್ ಕ್ಲಾಸ್) ಅನುಸರಣೆಯಾಗಿದೆ ಎಂದು ನೌಕಾಪಡೆ ಹೇಳಿದೆ.
RM Shri @rajnathsingh launched two frontline warships of the #IndianNavy – ‘Surat’ and ‘Udaygiri’ – at MDL #Mumbai on 17 May 22. ‘Surat’ is a Guided Missile Destroyer of P15B class, while ‘Udaygiri’ is a Stealth Frigate of P17A class.
📒https://t.co/4NQqnN9WWB pic.twitter.com/mzgZQyWDIs— PRO Defence Mumbai (@DefPROMumbai) May 17, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.