ದುಬೈ: ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ದೊರೆ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
ಅವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿ ಎಲ್ಲಾ ಸಚಿವಾಲಯಗಳು, ಸರ್ಕಾರಿ ವಲಯ 40 ದಿನಗಳ ಶೋಕಾಚರಣೆ ನಡೆಸಲಿದೆ. ಖಾಸಗಿ ವಲಯದಲ್ಲಿ 3 ದಿನಗಳ ಶೋಕಾಚರಣೆ ಇರಲಿದೆ ಎಂದು ಯುಎಇ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಖಲೀಫಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಶೇಖ್ ಖಲೀಫಾ ಬಿನ್ ಜಾಯೆದ್ ಅವರ ನಿಧನದ ಬಗ್ಗೆ ತಿಳಿದು ನನಗೆ ಅತೀವ ದುಃಖವಾಗಿದೆ. ಅವರು ಒಬ್ಬ ಮಹಾನ್ ರಾಜನೀತಿಜ್ಞ ಮತ್ತು ದಾರ್ಶನಿಕ ನಾಯಕರಾಗಿದ್ದರು, ಅವರ ಅಡಿಯಲ್ಲಿ ಭಾರತ-ಯುಎಇ ಸಂಬಂಧಗಳು ಸಮೃದ್ಧವಾಗಿವೆ. ಭಾರತದ ಜನರ ಸಂತಾಪಗಳು ಯುಎಇ ಜನರೊಂದಿಗೆ ಇವೆ. ಅವರ ಆತ್ಮಕೆ ಶಾಂತಿ ಸಿಗಲಿ” ಎಂದಿದ್ದಾರೆ.
I am deeply saddened to know about the passing away of HH Sheikh Khalifa bin Zayed. He was a great statesman and visonary leader under whom India-UAE relations prospered. The heartfelt condolences of the people of India are with the people of UAE. May his soul rest in peace.
— Narendra Modi (@narendramodi) May 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.