ಕೋಪನ್ ಹೇಗನ್: ಡೆನ್ಮಾರ್ಕ್ ಭೇಟಿಯನ್ನು ಬುಧವಾರ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ಪ್ರಕೃತಿಯೊಂದಿಗಿನ ಆಳವಾದ ಸಂಬಂಧ, ಹಳೆಯ ಕರಕುಶಲ ವಸ್ತುಗಳು, ಸಮರ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಉಡುಗೊರೆಗಳನ್ನು ನಾರ್ಡಿಕ್ ರಾಷ್ಟ್ರಗಳ ನಾಯಕರಿಗೆ ನೀಡಿದ್ದಾರೆ.
ಪ್ರಧಾನಿಯವರು ಮೇ 2 ರಂದು ಯುರೋಪ್ ದೇಶಗಳಿಗೆ ಮೂರು ದಿನಗಳ ಪ್ರವಾಸವನ್ನು ಕೈಗೊಂಡರು. ಅವರು ಜರ್ಮನಿ ಮತ್ತು ಡೆನ್ಮಾರ್ಕ್ಗೆ ಭೇಟಿ ನೀಡಿದ, ಬಳಿಕ ಪ್ಯಾರಿಸ್ಗೆ ಬಂದಿದ್ದಾರೆ. ಅಲ್ಲಿಂದ ಭಾರತ ಪ್ರಯಾಣ ಆರಂಭಿಸಿದ್ದಾರೆ.
ಕೋಪನ್ ಹೇಗನ್ನಲ್ಲಿ ನಾರ್ಡಿಕ್ ನಾಯಕರನ್ನು ಭೇಟಿಯಾದ ಮೋದಿ ಅಲ್ಲಿ ಅವರಿಗೆ ಭಾರತದ ವಿವಿಧ ರಾಜ್ಯಗಳ ಶ್ರೀಮಂತ ಪರಂಪರೆ ಬಿಂಬಿಸುವ ಉಡುಗೊರೆಗಳನ್ನು ನೀಡಿದ್ದಾರೆ. ಬನಾರಸ್ನ ಬೆಳ್ಳಿ ಮೀನಕರಿ ಪಕ್ಷಿಯನ್ನು ಡೆನ್ಮಾರ್ಕ್ ರಾಜಕುಮಾರಿ ಮೇರಿ ಅವರಿಗೆ ನೀಡಿದ್ದಾರೆ. ಛತ್ತೀಸ್ಗಢದ ಡೋಕ್ರಾ ದೋಣಿ ಕಲಾಕೃತಿಯನ್ನು ರಾಜಕುಮಾರ ಫೆಡ್ರಿಕ್ ಅವರಿಗೆ ನೀಡಿದ್ದಾರೆ. ಡೆನ್ಮಾರ್ಕ್ನ ರಾಣಿ ಮಾರ್ಗರೆಥೆ II ಗೆ ಗುಜರಾತ್ನ ರೋಗನ್ ಪೇಂಟಿಂಗ್ ನೀಡಿದ್ದಾರೆ. ಪ್ರಧಾನಮಂತ್ರಿಯವರು ಕೋಪನ್ ಹ್ಯಾಗನ್ ನಲ್ಲಿ ಡೆನ್ಮಾರ್ಕ್, ಐಸ್ಲ್ಯಾಂಡ್, ಫಿನ್ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ ಮತ್ತು ಬುಧವಾರ ನಡೆದ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಿದರು.
ಮೋದಿ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರಿಗೆ ರಾಜಸ್ಥಾನದ ಕೋಫ್ತ್ಗಿರಿ ಕಲೆಯೊಂದಿಗಿನ ‘ಧಾಲ್’ ನೀಡಿದರು.
ಪ್ರಧಾನಿ ಮೋದಿ ಅವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರಿಗೆ ಗೋಡೆಗೆ ನೇತು ಹಾಕುವ ಕಚ್ ಕಸೂತಿಯನ್ನು ಉಡುಗೊರೆಯಾಗಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಬೆಂಕಿಪೊಟ್ಟಣದಲ್ಲಿ ಇಟ್ಟ ಪಶ್ಮಿನಾವನ್ನು ಸ್ವೀಡನ್ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.