ನವದೆಹಲಿ: ಕಾಶ್ಮೀರದಲ್ಲಿ ಅಫ್ಘಾನಿಸ್ಥಾನದ ಸೇನಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗುತ್ತಿರುವ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗಿನಿಂದ, ಅಫ್ಘಾನಿಸ್ತಾನದ ಭಯೋತ್ಪಾದಕರು ಮತ್ತು ಮಿಲಿಟರಿ ಉಪಕರಣಗಳು ಕಾಶ್ಮೀರದೊಳಗೆ ದಾರಿ ಕಂಡುಕೊಳ್ಳುತ್ತಿವೆ ಎಂಬ ಆತಂಕವನ್ನು ಭದ್ರತಾ ಸಂಸ್ಥೆಗಳು ಹೊಂದಿವೆ.
“2000 ರ ದಶಕದ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಇದ್ದಾಗ, ನಾವು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸವನ್ನು ಕಂಡಿದ್ದೇವೆ. ಅಫ್ಘಾನ್ ಭಯೋತ್ಪಾದಕರನ್ನು ಸೆರೆಹಿಡಿದಿದ್ದೇವೆ ಅಥವಾ ಕೊಂದಿದ್ದೇವೆ” ಎಂದು ಅವರು ದೆಹಲಿಯಲ್ಲಿ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಕಾರ್ಯಕ್ರಮ ‘ರೈಸಿನಾ ಡೈಲಾಗ್’ ನಲ್ಲಿ ಮಾತನಾಡಿದರು.
ಪ್ರಸ್ತುತ ಅಫ್ಘಾನಿಸ್ತಾನದ ಭಯೋತ್ಪಾದಕರು ಇದುವರೆಗೆ ಕಾಶ್ಮೀರಕ್ಕೆ ಬಂದಿಲ್ಲ. ಆದರೆ ಅಲ್ಲಿನ ಆಯುಧಗಳು ಮತ್ತು ಇತರ ಉಪಕರಣಗಳು ಕಾಶ್ಮೀರದಲ್ಲಿ ಕಂಡು ಬರುತ್ತಿರುವ ಸಂಖ್ಯೆಯಲ್ಲಿ ಖಂಡಿತವಾಗಿಯೂ ಹೆಚ್ಚಳವಾಗಿದೆ, ವಿಶೇಷವಾಗಿ ನಾವು ಸೆರೆಹಿಡಿಯುತ್ತಿರುವ ಅಪಾಯಕಾರಿ ಸಾಧನಗಳು ಹೆಚ್ಚುತ್ತಿವೆ ಎಂದಿದ್ದಾರೆ.
ಯುಎಸ್ ನೇತೃತ್ವದ ನ್ಯಾಟೋ ಪಡೆಗಳು ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿತು ಮತ್ತು ದೇಶದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಲು ಪಡೆಗಳು ಬಳಸುತ್ತಿದ್ದ ಮಿಲಿಟರಿ ಉಪಕರಣಗಳನ್ನು ಬಿಟ್ಟು ಹೋಗಿದೆ. ಪೆಂಟಗನ್ ವರದಿಯ ಪ್ರಕಾರ, US $ 7 ಶತಕೋಟಿ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಅಫ್ಘಾನಿಸ್ತಾನದಲ್ಲಿ ಬಿಟ್ಟು ಹೋಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.