ನವದೆಹಲಿ: ಭಾರತ ಮತ್ತು ಫಿಜಿ ನಡುವಿನ ಬಾಂಧವ್ಯದ ಹಂಚಿಕೆಯ ಪರಂಪರೆಯು ಮಾನವೀಯತೆಯ ಸೇವೆಯ ಪ್ರಜ್ಞೆಯನ್ನು ಆಧರಿಸಿದೆ ಮತ್ತು ಎರಡು ದೇಶಗಳನ್ನು ಬೇರ್ಪಡಿಸುವ ವಿಶಾಲವಾದ ಸಾಗರ ಇದ್ದರೂ ಎರಡೂ ರಾಷ್ಟ್ರಗಳ ಸಂಸ್ಕೃತಿಯು ಭಾರತ-ಫಿಜಿ ನಡುವೆ ಸಂಪರ್ಕವನ್ನು ಇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಫಿಜಿಯಲ್ಲಿ ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ತಮ್ಮ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಹೃದಯ ಸಂಬಂಧಿ ಕಾಯಿಲೆಗಳು ಪ್ರಮುಖ ಸವಾಲಾಗಿರುವ ಇಡೀ ದಕ್ಷಿಣ ಪೆಸಿಫಿಕ್ ಪ್ರದೇಶದ ಆರೋಗ್ಯ ಸೌಲಭ್ಯವನ್ನು ಈ ಆಸ್ಪತ್ರೆಯು ಹೆಚ್ಚಿಸಲಿದೆ ಮತ್ತು ಸಾವಿರಾರು ಮಕ್ಕಳಿಗೆ ಹೊಸ ಜೀವನ ನೀಡುವ ಮಾರ್ಗ ಒದಗಿಸಲಿದೆ ಎಂದು ಹೇಳಿದರು.
“ಫಿಜಿಯಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಪೆಸಿಫಿಕ್ ಪ್ರದೇಶದಲ್ಲಿ, ಇದು ಮೊದಲ ಮಕ್ಕಳ ಹೃದಯ ಆಸ್ಪತ್ರೆಯಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ದೊಡ್ಡ ಸವಾಲಾಗಿರುವ ಪ್ರದೇಶದಲ್ಲಿ ಈ ಆಸ್ಪತ್ರೆಯು ಮಕ್ಕಳಿಗೆ ಹೊಸ ಜೀವನವನ್ನು ನೀಡಲಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ವಿಶ್ವದರ್ಜೆಯ ಚಿಕಿತ್ಸೆ ಮಾತ್ರವಲ್ಲದೆ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಆಸ್ಪತ್ರೆಯನ್ನು ನಿರ್ಮಿಸಿದ್ದಕ್ಕಾಗಿ ಫಿಜಿಯ ಸಾಯಿ ಪ್ರೇಮ್ ಫೌಂಡೇಶನ್, ಫಿಜಿ ಸರ್ಕಾರ ಮತ್ತು ಶ್ರೀ ಸತ್ಯಸಾಯಿ ಸಂಜೀವಿನಿ ಮಕ್ಕಳ ಹೃದಯ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.