ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಶ್ರೀನಗರ ಮೂಲದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ‘ಕಾಶ್ಮೀರ್ ಫೈಟ್ಸ್ ಬ್ಯಾಕ್’ ಎಂಬ ಶೀರ್ಷಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದೆ.
ಭಯೋತ್ಪಾದನೆಯು ಕಾಶ್ಮೀರದ ಜನರನ್ನು ಅವರ ಧರ್ಮವನ್ನು ಲೆಕ್ಕಿಸದೆ ಹೇಗೆ ಪ್ರಭಾವಿಸಿದೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.
ವಿಡಿಯೋದಲ್ಲಿ ನಾಗರಿಕರ ನೋವನ್ನು ತೋರಿಸಲಾಗಿದೆ. ಕಣಿವೆಯಲ್ಲಿ ಸ್ಥಿರತೆಗಾಗಿನ ಹೋರಾಟದಲ್ಲಿ ಸೇನೆಯು ಜನರೊಂದಿಗೆ ಇದೆ ಎಂದು ನಾಗರಿಕರಿಗೆ ಭರವಸೆ ನೀಡಲಾಗಿದೆ.
ವಿಡಿಯೋದ ಪ್ರಾರಂಭವು ಅಂತ್ಯಕ್ರಿಯೆಯ ಮೆರವಣಿಗೆ ಮತ್ತು ಅಳುತ್ತಿರುವ ಮಗುವನ್ನು ತೋರಿಸುತ್ತದೆ. ಕಾಶ್ಮೀರಿ ಪಂಡಿತರ ವಲಸೆ ಮತ್ತು ಕಲ್ಲೆಸೆತದ ಘಟನೆಗಳ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ. ಉಗ್ರರು ಕಣಿವೆಯ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದರು ಎಂಬುದನ್ನೂ ಇದು ಬಹಿರಂಗಪಡಿಸುತ್ತದೆ.
ಪತ್ರಕರ್ತ ಶುಜಾತ್ ಬುಖಾರಿ, ಸಾಮಾಜಿಕ ಕಾರ್ಯಕರ್ತ ಅರ್ಜುಮಂಡ್ ಮಜೀದ್, ಮಖನ್ ಲಾಲ್ ಬಿಂದು, ಸುಪಿಂದರ್ ಕೌರ್, ಅಜಯ್ ಪಂಡಿತ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತ ಮತ್ತು ಪರ್ವೇಜ್ ಅಹ್ಮದ್ ದಾರ್ ಸೇರಿದಂತೆ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಕಾಶ್ಮೀರಿಗಳಿಗೆ ವೀಡಿಯೊ ಶ್ರದ್ಧಾಂಜಲಿ ಸಲ್ಲಿಸುತ್ತದೆ.
ವಿಡಿಯೋದ ಹಿನ್ನೆಲೆಯಲ್ಲಿ ‘ಝೇಲಂ ರೋಯಾ ಫಾರ್ ಕಾಶ್ಮೀರ್’ ಹಾಡು ಪ್ಲೇ ಆಗುತ್ತದೆ. ಭದ್ರತಾ ಪಡೆಗಳು ನಾಗರಿಕರು ಮತ್ತು ಮಕ್ಕಳನ್ನು ಸಾಂತ್ವನಗೊಳಿಸುವುದನ್ನು ಇದು ತೋರಿಸುತ್ತದೆ. “ಈ ಹೋರಾಟದಲ್ಲಿ ಕಾಶ್ಮೀರ ಏಕಾಂಗಿಯಾಗಿಲ್ಲ, ನಾವು ಒಟ್ಟಾಗಿ ಈ ಹೋರಾಟವನ್ನು ಗೆಲ್ಲುತ್ತೇವೆ” ಎಂದು ವೀಡಿಯೊದಲ್ಲಿ ಹೇಳಲಾಗಿದೆ.
"कुछ बात है कि हस्ती मिटती नहीं हमारी
सदियों रहा है दुश्मन दौरे जहां हमारा"
-Iqbal#Kashmir & #Chinarwarrior have together fought for sustainable peace and prosperity in Kashmir.#kashmirlivesmatter #KashmirAgainstTerror @adgpi @NorthernComd_IA@OfficeOfLGJandK pic.twitter.com/I8WXb9vRot— Chinar Corps🍁 – Indian Army (@ChinarcorpsIA) April 15, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.