ನವದೆಹಲಿ: ಕ್ರೀಡಾ ಸಚಿವಾಲಯವು ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್-2022 ಗಾಗಿ ಕ್ರೀಡಾಪಟುಗಳ ತರಬೇತಿಗಾಗಿ ಮತ್ತು ಕ್ರೀಡಾ ಸಲಕರಣೆಗಳಿಗಾಗಿ 190 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.
ಸಚಿವಾಲಯವು 33 ಕ್ರೀಡಾ ವಿಭಾಗಗಳಿಗೆ ತರಬೇತಿ ಮತ್ತು ಸ್ಪರ್ಧೆಗಳ ವಾರ್ಷಿಕ ಕ್ಯಾಲೆಂಡರ್ ಅನ್ನು ಅಂತಿಮಗೊಳಿಸಿದೆ ಮತ್ತು 2022-23 ರ ಆರ್ಥಿಕ ವರ್ಷಕ್ಕೆ 259 ಕೋಟಿ ರೂಪಾಯಿಗಳನ್ನು ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಶನ್ಗಳ ಸಹಾಯಕ್ಕಾಗಿ ಮೀಸಲಿಟ್ಟಿದೆ.
2022-23ರ ಯೋಜಿತ ಸ್ಪರ್ಧೆ ಮತ್ತು ತರಬೇತಿ ಕ್ಯಾಲೆಂಡರ್ ಕುರಿತು 33 ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ವಿವರವಾದ ಚರ್ಚೆಗಳನ್ನು ಆಧರಿಸಿ ಬಜೆಟ್ ಅನ್ನು ನಿರ್ಧರಿಸಲಾಗಿದೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, 2022-23ರಲ್ಲಿ ರಾಷ್ಟ್ರೀಯ ಕ್ರೀಡಾ ಫೆಡರೇಶನ್ಗಳು ಮತ್ತು ವಿಶೇಷವಾಗಿ ಮುಂಬರುವ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಪ್ಯಾರಾ ಏಷ್ಯನ್ ಗೇಮ್ಸ್ಗೆ ಸಂಬಂಧಿಸಿದಂತೆ ತರಬೇತಿ ಮತ್ತು ಸ್ಪರ್ಧೆಗಳ ಯೋಜನೆಗಳು ಮತ್ತು ಪ್ರಸ್ತಾವನೆಗಳನ್ನು ಸರ್ಕಾರವು ಗಮನಿಸಿದೆ ಎಂದಿದ್ದಾರೆ.
ಸಚಿವಾಲಯವು ಆಟಗಾರರು ಮತ್ತು ಕ್ರೀಡಾ ಫೆಡರೇಶನ್ಗಳಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು. ಆಟಗಾರರು ಮತ್ತು ತಂಡಗಳು ತಮ್ಮ ತರಬೇತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕು ಮತ್ತು ಮುಂಬರುವ ಸ್ಪರ್ಧೆಗಳಲ್ಲಿ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.