ನವದೆಹಲಿ: ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಈ ವರ್ಷದ ಮಾರ್ಚ್ನಲ್ಲಿ ಸಾರ್ವಕಾಲಿಕ ಗರಿಷ್ಠ 1 ಲಕ್ಷ 42 ಸಾವಿರ ಕೋಟಿ ರೂಪಾಯಿಗಳನ್ನು ಮುಟ್ಟಿದೆ.
ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಿಜಿಎಸ್ಟಿ 25,830 ಕೋಟಿ ರೂಪಾಯಿ, ರಾಜ್ಯ ಸರಕು ಮತ್ತು ಸೇವಾ ತೆರಿಗೆ ಎಸ್ಜಿಎಸ್ಟಿ 32,378 ಕೋಟಿ ರೂಪಾಯಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆ ಐಜಿಎಸ್ಟಿ 74,470 ಕೋಟಿ ರೂಪಾಯಿ ಮತ್ತು ಸೆಸ್ 9,417 ಕೋಟಿ ರೂಪಾಯಿ ಆಗಿದೆ.
ಹಣಕಾಸು ಸಚಿವಾಲಯದ ಪ್ರಕಾರ, ಈ ವರ್ಷದ ಮಾರ್ಚ್ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ಈ ವರ್ಷದ ಜನವರಿಯಲ್ಲಿ ಸಂಗ್ರಹಿಸಲಾದ 1,40,986 ಕೋಟಿ ರೂಪಾಯಿಗಳ ಹಿಂದಿನ ದಾಖಲೆಯ ಸಾರ್ವಕಾಲಿಕ ಗರಿಷ್ಠವನ್ನು ಮೀರಿದೆ.
ಮಾರ್ಚ್, 2022 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ 15 ಶೇಕಡಾ ಹೆಚ್ಚಾಗಿದೆ. ತಿಂಗಳಿನಲ್ಲಿ, ಸರಕುಗಳ ಆಮದು ಆದಾಯವು ಶೇಕಡಾ 25 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 11 ಶೇಕಡಾ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.