ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರದ ರೈನಾವಾರಿ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ/ಟಿಆರ್ಎಫ್)ದ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಇಬ್ಬರೂ ಭಯೋತ್ಪಾದಕರು ನಾಗರಿಕರ ಹತ್ಯೆ ಸೇರಿದಂತೆ ಇತ್ತೀಚಿನ ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಂದ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹತ್ಯೆಯಾದ ಭಯೋತ್ಪಾದಕರಲ್ಲಿ ಒಬ್ಬ ಮೀಡಿಯಾದ ಐಡಿ ಕಾರ್ಡ್ ಹೊಂದಿದ್ದ, ಇದು ಮಾಧ್ಯಮ ದುರುಪಯೋಗದ ಸ್ಪಷ್ಟ ಪ್ರಕರಣವನ್ನು ಸೂಚಿಸುತ್ತದೆ ಎಂದು ಪೊಲೀಸ್ ಮಹಾನಿರೀಕ್ಷಕ (ಕಾಶ್ಮೀರ) ವಿಜಯ್ ಕುಮಾರ್ ಹೇಳಿದ್ದಾರೆ.
ಮೀಡಿಯಾ ಕಾರ್ಡ್ ಹೊಂದಿದ್ದ ಭಯೋತ್ಪಾದಕನನ್ನು ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಈತ ಹಿಂದೆ ಪತ್ರಕರ್ತನಾಗಿದ್ದ. ಈತ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಆನ್ಲೈನ್ ನ್ಯೂಸ್ ಪೋರ್ಟಲ್ ‘ವ್ಯಾಲಿ ನ್ಯೂಸ್ ಸರ್ವೀಸ್’ ಅನ್ನು ನಡೆಸುತ್ತಿದ್ದ ಎನ್ನಲಾಗಿದೆ.
ಈತ 2021 ರಲ್ಲಿ ಭಯೋತ್ಪಾದನೆಗೆ ಸೇರಿದ್ದ, ಭಯೋತ್ಪಾದಕ ಅಪರಾಧಗಳಿಗಾಗಿ ಈಗಾಗಲೇ ಎರಡು ಎಫ್ಐಆರ್ಗಳನ್ನು ಈತನ ವಿರುದ್ಧ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಎರಡನೇ ಭಯೋತ್ಪಾದಕನನ್ನು ಬಿಜ್ಬೆಹರಾದ ಹಿಲಾಲ್ ಅಹ್ ರಾಹ್ ಎಂದು ಗುರುತಿಸಲಾಗಿದ್ದು, ಆತ ‘ಸಿ’ ವರ್ಗದ ಭಯೋತ್ಪಾದಕ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
One of the killed categorised local #terrorists of proscribed #terror outfit LeT was carrying Identity Card (ID) of media. It indicates a clear case of misuse of media: IGP Kashmir@JmuKmrPolice pic.twitter.com/av3cnyRA8f
— Kashmir Zone Police (@KashmirPolice) March 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.