ಮಂಗಳೂರು: ಭಾರತ ಸೇವಾ ದಳದ ಮಂಗಳೂರು ತಾಲೂಕು ಘಟಕ ಮಂಗಳವಾರ ಶಕ್ತಿನಗರದ ನಲ್ಯಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನದ ’ಶಾಲೆಯ ಮಕ್ಕಳಿಗೆ ನಾಯಕತ್ವ’ ಕಾರ್ಯಾಗಾರ ಆಯೋಜಿಸಿತ್ತು.
28 ಸರ್ಕಾರಿ ಶಾಲೆಗಳ ಸುಮಾರು 100 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಶಾಸಕ ಜೆ.ಆರ್.ಲೋಬೊ ತಮ್ಮ ಪ್ರಮುಖ ಭಾಷಣದಲ್ಲಿ ‘ಯಾವುದೇ ಮಗುವನ್ನು ನಿರ್ಲಕ್ಷಿಸುವಂತಿಲ್ಲ. ಪ್ರತಿ ಮಗು ಒಂದು ಪವಾಡ ಮತ್ತು ಪುಸ್ತಕಗಳ ಜೊತೆಗೆ, ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ನೀಡಬೇಕು. ಇಡೀ ದಿನ ಅಧ್ಯಯನ ಮಾಡಿ ಯಾವುದೇ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದರಿಂದ ಇಲ್ಲವಾದಲ್ಲಿ ಅವರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು.
ಮೇಯರ್ ಜೆಸಿಂತಾ ಆಲ್ಫ್ರೆಡ್ ಕಾರ್ಯಾಗಾರ ಉದ್ಘಾಟಿಸಿದರು.
ಗಣೇಶ್ ಕುಂಟಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾ ದಳ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರಿಯಾನ್, ಟಿ.ಕೆ. ಸುಧೀರ್, ಉದಯ ಕುಂದರ್, ಕಾರ್ಪೋರೇಟರ್ ಅಖಿಲಾ ಆಳ್ವ, ಮಾಜಿ ಮೇಯರ್ ಅಬ್ದುಲ್ ಅಜೀಜ್, ರವೀಂದ್ರ ಹಾಗೂ ಮಂಜೇಗೌಡ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.