ನವದೆಹಲಿ: ಭಾರತವನ್ನು ವಿಶ್ವದ ಅತಿದೊಡ್ಡ ಸ್ಟಾರ್ಟ್ ಅಪ್ ಹಬ್ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಅಬುಧಾಬಿಯಲ್ಲಿ ನಡೆದ ಗೇಟ್ ವೇ ಟು ಗ್ರೋತ್ – ರೌಂಡ್ಟೇಬಲ್ ಆನ್ ಇಂಡಿಯನ್ ಸ್ಟಾರ್ಟಪ್ ಇಕೋಸಿಸ್ಟಮ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ವಿಶ್ವದ ನಂಬರ್ ಒನ್ ಸ್ಟಾರ್ಟ್ ಅಪ್ ತಾಣವಾಗಿ ಹೊರಹೊಮ್ಮುವುದು ನಮ್ಮ ಆಕಾಂಕ್ಷೆಯಾಗಿದೆ ಎಂದಿದ್ದಾರೆ.
ಸ್ಟಾರ್ಟ್-ಅಪ್ಗಳಿಗೆ ಭಾರತ ಅತ್ಯುತ್ತಮ ಪರಿಸರ ವ್ಯವಸ್ಥೆಯಾಗಿದೆ. ಹೂಡಿಕೆದಾರರು ಮತ್ತು ಉದ್ಯಮಿಗಳ ನಡುವೆ ಸಮತೋಲನವಾದ ಫಲಿತಾಂಶವನ್ನು ಪಡೆಯಲು ಮತ್ತು ಎಲ್ಲರಿಗೂ ಗೆಲುವು ಸಾಧಿಸಲು ಉತ್ತಮವಾದ ವ್ಯವಸ್ಥೆ ಒದಗಿಸುತ್ತದೆ ಎಂದಿದ್ದಾರೆ.
ಸ್ಟಾರ್ಟ್ಅಪ್ ಬಗ್ ಭಾರತದ ಕಲ್ಪನೆ ಸೆಳೆದಿದೆ. ಸ್ಟಾರ್ಟ್ಅಪ್ ಉದ್ಯಮವು ಪ್ರತಿನಿಧಿಸುವ ಸಂಪೂರ್ಣ ನಾವೀನ್ಯತೆ ಪರಿಸರ ವ್ಯವಸ್ಥೆಯು ಭಾರತಕ್ಕೆ ಹೊಸ ದಿಕ್ಕ ಮತ್ತು ವೇಗವನ್ನು ನೀಡುತ್ತಿದೆ ಎಂದರು.
ದುಬೈ ಎಕ್ಸ್ಪೋನಲ್ಲಿ ಭಾರತದ ಸ್ಟಾರ್ಟ್ಅಪ್ಗಳು ಗಮನ ಸೆಳೆದಿವೆ. ಈ ಎಕ್ಸ್ಪೋದಿಂದ ಹಣಕಾಸು ಸಂಗ್ರಹಿಸಲು ಅವಕಾಶ ಪಡೆದಿದ್ದು, ಅವರಿಂದ ಉತ್ತಮವಾದ ಸ್ಪಂದನೆ ವ್ಯಕ್ತವಾಗಿದೆ. ಇದು ಯುಎಇಯೊಂದಿಗೆ ಭಾರತದ ಸ್ನೇಹ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.