ನವದೆಹಲಿ: ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ, ಭಾರತೀಯ ರೈಲ್ವೇಯ ಚಿತ್ರಣವನ್ನೇ ಬದಲಿಸುವ ಮಹತ್ವದ ಗುರಿ ಹೊಂದಿರುವ ಸರ್ಕಾರ ರೈಲ್ವೇ ವಲಯದಲ್ಲಿ 8.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ, ‘ದಶಕಗಳಿಂದ ರೈಲ್ವೇ ವಲಯದಲ್ಲಿ ಬಂಡವಾಳವನ್ನೇ ಹೂಡಲಾಗಿಲ್ಲ. ಹೀಗಾಗಿ ನಾವು 8.5 ಲಕ್ಷ ಕೋಟಿ ಬಂಡವಾಳ ಹೂಡಲು ನಿರ್ಧರಿಸಿದ್ದೇವೆ. ಇದೊಂದು ಅದ್ಭುತ ಕಾರ್ಯ ಮತ್ತು ಇದರಿಂದ ರೈಲ್ವೇ ಚಿತ್ರಣವೇ ಬದಲಾಗಲಿದೆ’ ಎಂದಿದ್ದಾರೆ.
ರಸ್ತೆ ವಲಯದಲ್ಲೂ ಈ ಬಾರಿ ಬಂಡಾವಳ ದ್ವಿಗುಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಜಿಎಸ್ಟಿ ಕಾಯ್ದೆಯನ್ನು ಜಾರಿಗೊಳಿಸಲು ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.