ನವದೆಹಲಿ: ನೋವಾವ್ಯಾಕ್ಸ್ ಇಂಕ್ ಸಂಸ್ಥೆಯು ತನ್ನ ಕೋವಿಡ್-19 ಲಸಿಕೆಯನ್ನು 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ.
12-17 ವರ್ಷ ವಯೋಮಾನದವರಿಗೆ ಬಳಸಲು ಈ ಲಸಿಕೆ ಅನುಮೋದನೆ ಪಡೆದಿರುವುದು ಜಾಗತಿಕವಾಗಿ ಇದೇ ಮೊದಲು. ಇದನ್ನು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ Covovax ಬ್ರಾಂಡ್ ಹೆಸರಿನಡಿಯಲ್ಲಿ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ನೋವವ್ಯಾಕ್ಸ್ ಇಂಕ್ ಅಮೆರಿಕಾ ಮೂಲದ ಕಂಪನಿಯಾಗಿದೆ.
ನೊವವ್ಯಾಕ್ಸ್ ಕಳೆದ ತಿಂಗಳು 12 ರಿಂದ 17 ವರ್ಷ ವಯಸ್ಸಿನ 2,247 ಜನರ ಮೇಲೆ ಡೋಸ್ ಅನ್ನು ಪರೀಕ್ಷಿಸಿದೆ. ಇದು ಕೊನೆಯ ಹಂತದ ಪ್ರಯೋಗವಾಗಿದ್ದು, ಕೋವಿಡ್-19 ವಿರುದ್ಧ ಲಸಿಕೆ 80% ಪರಿಣಾಮಕಾರಿಯಾಗಿದೆ ಎಂದು ತಿಳಿದು ಬಂದಿದೆ.
12 ರಿಂದ 17 ವರ್ದ 460 ಭಾರತೀಯರನ್ನು ಒಳಗೊಂಡ ಮಧ್ಯದಿಂದ ಕೊನೆಯ ಹಂತದ ಅಧ್ಯಯನದಲ್ಲಿ ಲಸಿಕೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಕಂಪನಿಯು ಮಂಗಳವಾರ ಹೇಳಿದೆ.
Covovax Biological E’s Corbevax, Zydus Cadila’s ZyCoV-D ಮತ್ತು ಭಾರತ್ ಬಯೋಟೆಕ್ನ Covaxin ನಂತರ ಭಾರತದಲ್ಲಿ 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಧಿಕೃತಗೊಳಿಸಲಾದ ನಾಲ್ಕನೇ ಕೋವಿಡ್-19 ಲಸಿಕೆಯಾಗಿದೆ.
ಇತ್ತೀಚಿನವರೆಗೆ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುತ್ತಿದ್ದ ಭಾರತ, ಕಳೆದ ವಾರ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ Biological E’s Corbevax ಡೋಸ್ ನೀಡಲು ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.