ನೋಯ್ಡಾ: ಯುವಕನೊಬ್ಬ ಮಧ್ಯರಾತ್ರಿ ನೊಯ್ಡಾ ರಸ್ತೆಯಲ್ಲಿ ಓಡುತ್ತಿರುವ ವಿಡಿಯೋ ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.
ಬೆವರಿನಿಂದ ತೊಯ್ದಿದ್ದರೂ ಓಡುತ್ತಲೇ ಇದ್ದ ಆ ಯುವಕನನ್ನು ಕಂಡು ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಅವರು ಲಿಫ್ಟ್ ನೀಡುತ್ತೇನೆ ಎನ್ನುತ್ತಾರೆ. ಆದರೆ ಅವರ ಮನವಿಯನ್ನು ಯುವಕ ಪದೇ ಪದೇ ತಿರಸ್ಕರಿಸುತ್ತಾನೆ.
19 ವರ್ಷದ ಪ್ರದೀಪ್ ಮೆಹ್ರಾ ಅವರೊಂದಿಗಿನ ತನ್ನ ಸಂವಹನವನ್ನು ವಿನೋದ್ ಕಪ್ರಿ ಅವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ರಾತ್ರಿಯ ವೇಳೆ 10 ಕಿಮೀ ಓಡುವ ಆ ಯುವಕ ಉದ್ದೇಶ ಎಂತವರನ್ನು ಒಂದು ಬಾರಿ ಆಶ್ಚರ್ಯಚಕಿತಗೊಳಿಸುತ್ತದೆ.
ವೀಡಿಯೊವನ್ನು ಕಪ್ರಿ ತನ್ನ ಕಾರಿನಿಂದ ಚಿತ್ರೀಕರಣ ಮಾಡಿದ್ದಾರೆ. ಆ ಯುವಕ ಮೆಕ್ಡೊನಾಲ್ಡ್ನಲ್ಲಿ ತನ್ನ ಶಿಫ್ಟ್ ಕೆಲಸವನ್ನು ಮುಗಿಸಿ ಪ್ರತಿನಿತ್ಯ ಮನೆಗೆ ಓಡುತ್ತಲೇ ಸಾಗುತ್ತಾನೆ. ಇದಕ್ಕೆ ಕಾರಣ ಭಾರತೀಯ ಸೇನೆ ಸೇರಬೇಕು ಎಂಬ ಯುವಕನ ಅದಮ್ಯ ಇಚ್ಛಾಶಕ್ತಿ.
ಬೆಳಿಗ್ಗೆ ಓಡಬಹುದಲ್ಲಾ ಎಂಬ ಕಪ್ರಿ ಅವರ ಪ್ರಶ್ನೆಗೆ ಉತ್ತರಿಸಿದ ಯುವಕ, ನನಗೆ ಬೆಳಿಗ್ಗೆ ಓಡಲು ಸಮಯ ಸಾಕಾಗುವುದಿಲ್ಲ. 8 ಗಂಟೆಗೆ ಎದ್ದು ತಿಂಡಿ ತಯಾರಿಸಬೇಕು ಎನ್ನುತ್ತಾನೆ.
ಮೂಲತಃ ಉತ್ತರಾಖಂಡದವನಾದ ಮೆಹ್ರಾ ನೋಯ್ಡಾದ ಸೆಕ್ಟರ್ 16 ರಲ್ಲಿನ ತನ್ನ ಉದ್ಯೋಗದ ಸ್ಥಳದಿಂದ ಬರೋಲಾದಲ್ಲಿನ ಮನೆಗೆ ಪ್ರತಿದಿನ 10-ಕಿಮೀ ನಡೆಯುತ್ತಾನೆ, ಮನೆಯಲ್ಲಿ ಅವರು ಸಹೋದರನೊಂದಿಗೆ ವಾಸಿಸುತ್ತಾರೆ. ಅಸ್ವಸ್ಥನಾಗಿದ್ದ ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆತ ಹೇಳಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತದೆ ಎಂದು ಕಪ್ರಿಯವರಿಗೆ, ನನ್ನನ್ನು ಯಾರು ಗುರುತಿಸುತ್ತಾರೆ ಬಿಡಿ. ನಾನೇನೂ ತಪ್ಪು ಕೆಲಸ ಮಾಡುತ್ತಿಲ್ಲ ಎಂದು ಯುವಕ ಹೇಳಿದ್ದಾನೆ.
ಈ ವಿಡಿಯೋ ಸಂಭಾಷಣೆ ನಿಜಕ್ಕೂ ಅದ್ಭುತವಾಗಿದ್ದು, ಯುವಕ ಬದುಕುತ್ತಿರುವ ರೀತಿ ಪ್ರೇರಣಾದಾಯಿಯಾಗಿದೆ.
This is PURE GOLD❤️❤️
नोएडा की सड़क पर कल रात 12 बजे मुझे ये लड़का कंधे पर बैग टांगें बहुत तेज़ दौड़ता नज़र आया
मैंने सोचा
किसी परेशानी में होगा , लिफ़्ट देनी चाहिएबार बार लिफ़्ट का ऑफ़र किया पर इसने मना कर दिया
वजह सुनेंगे तो आपको इस बच्चे से प्यार हो जाएगा ❤️😊 pic.twitter.com/kjBcLS5CQu
— Vinod Kapri (@vinodkapri) March 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.