ನವದೆಹಲಿ: 2021-22 ರ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ ಸರ್ಕಾರವು ಇದುವರೆಗೆ 725 ಲಕ್ಷ ಮೆಟ್ರಿಕ್ ಟನ್ ಭತ್ತದ ಬೆಳೆಯನ್ನು ಸಂಗ್ರಹಿಸಿದೆ ಮತ್ತು 102.29 ಲಕ್ಷ ರೈತರಿಗೆ 1,42,282.68 ಕೋಟಿ ರೂ.ಪಾವತಿಸಿದೆ.
ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಖಾರಿಫ್ ಮಾರ್ಕೆಟಿಂಗ್ ಋತು 2021-22 ರಲ್ಲಿ ಈ ವರ್ಷ ಮಾರ್ಚ್ 6 ರವರೆಗೆ 725.93 LMT ಭತ್ತವನ್ನು ಖರೀದಿಸಲಾಗಿದೆ.
ಮುಖ್ಯವಾಗಿ ಚಂಡೀಗಢ , ಗುಜರಾತ್, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ತ್ರಿಪುರ, ಬಿಹಾರ, ಒಡಿಶಾ, ಮಹಾರಾಷ್ಟ್ರ, ಪುದುಚೇರಿ, ಛತ್ತೀಸ್ಗಢ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಹೆಚ್ಚು ಭತ್ತ ಖರೀದಿ ಮಾಡಲಾಗಿದೆ.
ಈ ಸಂಗ್ರಹಣೆಯಿಂದ ಸುಮಾರು 102.29 ಲಕ್ಷ ರೈತರಿಗೆ MSP ಮೌಲ್ಯ ರೂ. 1,42,282.68 ಕೋಟಿ ಪಾವತಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪಂಜಾಬ್ ಗರಿಷ್ಠ 186 ಲಕ್ಷ ಕೋಟಿ ಭತ್ತದ ಬೆಳೆಯನ್ನು ಪಡೆದುಕೊಂಡಿದ್ದು, 9.24 ಲಕ್ಷ ರೈತರಿಗೆ 36,623 ಕೋಟಿ ಎಂಎಸ್ಪಿ ಮೌಲ್ಯ ಪಾವತಿಯಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಲಾಭದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.