ಮಂಗಳೂರು : ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯ ವತಿಯಿಂದ ಭಾನುವಾರ ಏಕಾದಶ ರುದ್ರ ನಮಸ್ಕಾರ, ಶಿವಾಷ್ಟೋತರ ಶತನಾಮಾನಿ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಕ್ಷೇತ್ರ ಕದ್ರಿಯ ಅರ್ಚಕರಾದ ಡಾ| ಪ್ರಭಾಕರ ಅಡಿಗ, ಭಾರತಿ ಅಮೀನ್, ಜಗದೀಶ್ ಶೆಟ್ಟಿ ಕಾವೂರು, ನಾರಾಯಣ ಶಬರಾಯ, ಗೋಕುಲ್ ನಾಥ್ ಶೆಣೈ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ದಯಾನಂದ ಕಟೀಲ್ ಅವರ ಶಿವಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಮುಂಜಾನೆ 4.30 ರಿಂದಲೇ ಯೋಗಪಟುಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ದವಾಗಿ ದೇವಾಲಯದ ಅಂಗಣದಲ್ಲಿ ಸಾಲಾಗಿ ಕುಳಿತುಕೊಳ್ಳಲು ಆಗಮಿಸಿದ್ದರು. ಯೋಗಪಟುಗಳು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಬಂದವರೆಲ್ಲ ದೇವಸ್ಥಾನದ ಸುತ್ತಲೂ ನೆಲದ ಮೇಲೆ ಸಾಲಾಗಿ ಶಿಸ್ತುಬದ್ದವಾಗಿ ಕುಳಿತುಕೊಂಡು ಸತತ 3 ಗಂಟೆ ಕಾಲ ಯೋಗಾಸನ ಮಾಡಿದರು. ಶಿವನಮಸ್ಕಾರದ ಮಹತ್ವವನ್ನು ಈಶ್ವರ ಕೊಟ್ಟಾರಿ ನೀಡಿದರು. ಶ್ರೀಮತಿ ಲೀಲಾವತಿ ಸತೀಶ್ ಅವರು ಅಷ್ಟೋತ್ತರ ಪಠಣೆ ಮಾಡಿಸಿದರು. ವಂದನಾ ವಿದ್ಯಾದರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಯೋಗ ಶಿಕ್ಷಕರಾದ ಲಕ್ಷ್ಮೀನಾರಾಯಣ, ಪ್ರತಾಪ್, ಕೆ.ಎಸ್, ಜಗನ್ನಾಥ ಹಳೆಯಂಗಡಿ, ಜಗನ್ನಾಥ, ಪುಷ್ಪಾವತಿ, ಲೀಲಾವತಿ ಸತೀಶ್, ಸುಮಂಗಲಾ, ಪ್ರಭಾವತಿ, ನಗರ ಸಂಚಾಲಕರಾದ ಹರೀಶ್ ಅಂಚನ್, ಕನಕ ಅಮೀನ್, ಗೀತಾ ಶೆಟ್ಟಿ, ಲೋಕೇಶ್ ಪೊಳಲಿ, ಕೇಶವ, ಪ್ರವೀಣ್, ಗಣೇಶ್ ಉಪಸ್ಥಿತರಿದ್ದರು. ಮಂಗಳೂರಿನ ಕದ್ರಿ, ಕಂಕನಾಡಿ, ಉಳ್ಳಾಲ, ಕಾವೂರು, ಸುರತ್ಕಲ್, ಪೊಳಲಿ, ವಾಮದಪದವು, ಬಿ.ಸಿ.ರೋಡ್ನಿಂದ ಯೋಗಪಟುಗಳು ಭಾಗವಹಿಸಿದರು. ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್, ರವೀಶ್ ಕುಮಾರ್ ಮಾರ್ಗದರ್ಶನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಹಾಗೂ ಸುಳ್ಯ ತಾಲೂಕಿನ ಪಂಜ ಸದಾಶಿವರುದ್ರ ದೇವಸ್ಥಾನದಲ್ಲೂ ಏಕಾದಶ ರುದ್ರ ನಮಸ್ಕಾರ ಜರುಗಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.