ನವದೆಹಲಿ: ಸೈಯದ್ ಅಲಿ ಶಾ ಗಿಲಾನಿ ಸೇರಿದಂತೆ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ನ ಮೂರು ಮಂದಿ ನಾಯಕರು ದೆಹಲಿಯಲ್ಲಿನ ಪಾಕಿಸ್ಥಾನ ರಾಯಭಾರಿ ಕಛೇರಿಗೆ ಭೇಟಿ ನೀಡಿ ರಾಯಭಾರಿ ಅಬ್ದುಲ್ ಬಸಿತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಹುರಿಯತ್ ನಾಯಕರು ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಗೌಪ್ಯ ಪತ್ರವೊಂದನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ನವಾಝ್ ಅವರಿಗೆ ಪತ್ರ ಕಳುಹಿಸಿಕೊಟ್ಟಿರುವುದನ್ನು ಹುರಿಯತ್ ಕಾನ್ಫರೆನ್ಸ್ ವಕ್ತಾರ ಅಯಾಝ್ ಅಕ್ಬರ್ ಒಪ್ಪಿಕೊಂಡಿದ್ದಾನೆ. ‘ಈ ಪತ್ರ ತುಂಬಾ ಪ್ರಮುಖವಾದುದು ಮತ್ತು ಗೌಪ್ಯವಾದುದು. ಈ ಪತ್ರವನ್ನು ನವಾಝ್ಗೆ ತಲುಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದಿದ್ದಾನೆ.
ಅಯಾಝ್, ಪೀರ್ ಸೈಫುಲ್ಲಾಹ, ಅಲ್ತಾಫ್ ಅಹ್ಮದ್ ಬಸಿತ್ ಅವರನ್ನು ಭೇಟಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.