ಬೆಂಗಳೂರು: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ನಾವು “ನನ್ನ ಪಾಲಿಸಿ ನನ್ನ ಕೈಯಲ್ಲಿ” ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನ ಜಿಕೆವಿಕೆಯ ಬಿ.ಹೆಚ್.ಎಸ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವರು ಮಾತನಾಡಿದರು.
ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ. ಹಿಂಗಾರು 2021-22ರ ಹಂಗಾಮಿನಲ್ಲಿ ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು Inland Letter ನಮೂನೆಯಲ್ಲಿ ವಿತರಿಸುವ ಕಾರ್ಯಕ್ರಮ ಇದಾಗಿದೆ. 2021 ರ ಮುಂಗಾರು ಹಂಗಾಮಿನಲ್ಲಿ ರೂ .113.49 ಕೋಟಿಗಳ ಬೆಳೆ ವಿಮಾ ಪರಿಹಾರ ಮೊತ್ತವು ಸ್ಥಳೀಯ ಪ್ರಕೃತಿ ವಿಕೋಪಗಳಡಿ ಇತ್ಯರ್ಥವಾಗಿದ್ದು, 2016-17 ಹಾಗೂ 2017-18ರ ಮುಂಗಾರು , ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಲಭ್ಯವಿಲ್ಲದ ಕಾರಣ ತಿರಸ್ಕೃತಗೊಂಡ ರೂ . 100.24 ಕೋಟಿಗಳನ್ನು ESCROW ಖಾತೆಯ ಮೂಲಕ 1.27 ಲಕ್ಷ ಅರ್ಹ ರತ ಫಲಾನುಭವಿಗಳಿಗೆ ಇತ್ಯಾರ್ಥಪಡಿಸಲಾಗಿದೆ. ಕಳೆದ ಬಾರಿ ನಡೆದ ಸಭೆಯಲ್ಲಿ ವಿಮಾ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರ ಫಲವಾಗಿ ಒಂದೇ ತಿಂಗಳಿನಲ್ಲಿ , ರೂ .43,89 ಕೋಟಿ ಪರಿಹಾರ ಮೊತ್ತವನ್ನು 33,160 ರೈತರಿಗೆ ಇತ್ಯರ್ಥಪಡಿಸಿದ್ದಾರೆ. NPCI Validation ವೈಫಲ್ಯದಿಂದಾಗಿ ಹಲವಾರು ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಇತ್ಯರ್ಥವಾಗದ ಕಾರಣ ಎಲ್ಲಾ ರೈತರು ಕಡ್ಡಾಯವಾಗಿ ಆಧಾರನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲೇಬೇಕೆಂದು ಮತ್ತೊಮ್ಮೆ ಸಚಿವರು ಪುನರುಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.