ನವದೆಹಲಿ: ನಮ್ಮ ಸರ್ಕಾರವು ದೊಡ್ಡ ನಗರಗಳ ಗಡಿಯನ್ನು ಮೀರಿ ಆರೋಗ್ಯ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದೆ ಮತ್ತು ‘ಒನ್ ಇಂಡಿಯಾ ಒನ್ ಹೆಲ್ತ್ “ಎಂಬ ಸ್ಪೂರ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಜೆಟ್ ವೆಬಿನಾರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೆಬಿನಾರಿನಲ್ಲಿ ದೇಶದ ಆರೋಗ್ಯ ರಚನೆ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಇ-ಸಂಜೀವನಿ, ಮತ್ತು ಟೆಲಿಮೆಂಟಲ್ ಹೆಲ್ತ್ ಎಂಬ ಮೂರು ಸೆಷನ್ಗಳು ನಡೆಯಲಿದೆ.
ದೊಡ್ಡ ನಗರಗಳ ಆಚೆಗೂ ಭಾರತದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸಲು ನಾವು ಬಯಸುತ್ತೇವೆ. ಬ್ಲಾಕ್, ಜಿಲ್ಲಾ ಮಟ್ಟಗಳಲ್ಲಿ, ಗ್ರಾಮಗಳಲ್ಲಿ ಮೂಲಸೌಕರ್ಯ ವೃದ್ಧಿಸುವುದು ನಮ್ಮ ಗುರಿ. ಇದಕ್ಕಾಗಿ ‘ಒಂದು ಭಾರತ, ಒಂದು ಆರೋಗ್ಯ’ ಧ್ಯೇಯದೊಂದಿಗೆ ಅಗತ್ಯ ಆರೋಗ್ಯ ಸೌಲಭ್ಯಗಳ ನಿರ್ಮಾಣ ಮಾಡುತ್ತಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಮೂಲಸೌಕರ್ಯದಲ್ಲಿ ಒಂದು ಕ್ರಾಂತಿಯನ್ನು ತರಲು ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ಅಗತ್ಯವನ್ನು ಮೋದಿ ಹೈಲೈಟ್ ಮಾಡಿದ್ದಾರೆ.
“ನಮ್ಮ ಗಮನವು ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲಿದೆ. ಆಧುನಿಕ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ವಿಸ್ತರಣೆ, ಸಂಶೋಧನೆ ಮತ್ತು ಆಧುನಿಕ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವತ್ತ ಬಜೆಟ್ನಲ್ಲಿ ಗಮನ ಹರಿಸಲಾಗಿದೆ” ಎಂದಿದ್ದಾರೆ.
We want to build a health infrastructure in India which is beyond the big cities. With a spirit of 'One India, One Health' essential health facilities to be brought in villages at block, district level. Pvt sector to play a key role for their maintenance & up-gradation: PM Modi pic.twitter.com/kHYRUHs4M5
— ANI (@ANI) February 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.