ಕಚೇರಿ ಕಟ್ಟಡಗಳಾಗಲಿ, ಬ್ಯಾಂಕುಗಳಾಗಲಿ, ಹೂತೋಟವಾಗಲಿ, ಬೀಚ್ ಅಥವಾ ಸಾರ್ವಜನಿಕ ಸ್ಥಳಗಳಾಗಲಿ ಎಲ್ಲಾ ಪ್ರದೇಶಗಳಿಗೂ ದೇಶದ ಜನತೆ ತಲುಪುವಂತಿರಬೇಕು. ವಿಕಲಚೇತನರೂ ದೇಶದ ಮೂಲೆ ಮೂಲೆಯನ್ನು ತಲುಪುವಂತಿರಬೇಕು. ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಸಾಧನೆ ಮಾಡಿದೆ ರೆಡ್ ರ್ಯಾಂಪ್ ಯೋಜನೆ. ಈ ಯೋಜನೆಯಿಂದಾಗಿ ಅಂಗವಿಕಲರು ಬೀಚ್ ಸೇರಿದಂತೆ ಕಷ್ಟದಾಯಕ ಎನಿಸಿದ ಜಾಗದಲ್ಲಿ ಕೂಡ ಆರಾಮವಾಗಿ ಓಡಾಡಬಹುದು.
ವಿಕಲಾಂಗರ ಬಗ್ಗೆ ಜಾಗೃತಿ ಮತ್ತು ಸಂವೇದನಾಶೀಲತೆ ಭಾರತದಲ್ಲಿ ಹೆಚ್ಚುತ್ತಿದೆ. ವಿಕಲಾಂಗ ಜನರ ಸಂಖ್ಯೆ ಕಡಿಮೆಯಿದ್ದರೂ, ಕೆಲವು ಸಂಸ್ಥೆಗಳು ಅಥವಾ ವ್ಯಕ್ತಿಗಳು ವಿಕಲಾಂಗರಿಗೆ ಗಮನಾರ್ಹ ಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ರೆಡ್ ರ್ಯಾಂಪ್ ಯೋಜನೆ ಇಂಥದ್ದೇ ಒಂದು ಯೋಜನೆ ಆಗಿದೆ. ವಿಕಲಾಂಗರು ಯಾವುದೇ ಸ್ಥಳಗಳಿಗೆ ಬೇರೊಬ್ಬರ ಸಹಾಯವಿಲ್ಲದೆ ತಮಗೆ ಬೇಕಾದಲ್ಲಿ ಓಡಾಡುವಂತೆ ಮಾಡುವಲ್ಲಿ ಇವು ಗಮನ ಹರಿಸುತ್ತಿವೆ. ವಿಕಲಾಂಗರು ತಮ್ಮ ಕೆಲಸ-ಕಾರ್ಯಗಳನ್ನು ತಾವೇ ಮಾಡುವಲ್ಲಿ ಈ ಯೋಜನೆ ಅನುಕೂಲವಾಗಿದೆ.
ಎಚ್ & ಆರ್ ಜಾನ್ಸನ್ ಅವರ ರೆಡ್ ರ್ಯಾಂಪ್ ಯೋಜನೆಯು ಜನರ ಚಿಂತನೆಗಳಲ್ಲಿ ಮತ್ತು ಇಂತಹ ಯೋಜನೆಗಳನ್ನು ನಿರ್ವಹಿಸುತ್ತಿರುವ ಇನ್ನಿತರರಲ್ಲೂ ಬದಲಾವಣೆ ತರುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ವಿಶೇಷವಾಗಿ ಗಾಲಿಕುರ್ಚಿಗಳ ಸಹಾಯದಿಂದ ಓಡಾಡುವ ಜನರಿಗೆ ರಸ್ತೆಗಳಲ್ಲದೆ ವಾಯು ವಿಹಾರಕ್ಕಾಗಿ ಕಡಲತೀರಗಳಿಗೆ ತಲುಪಲು ರೆಡ್ ರ್ಯಾಂಪ್ ಆರಂಭದಲ್ಲಿ ಟೈಲ್ಸ್ಗಳ ಸಹಾಯದಿಂದ ಗೋವಾದ ಕಿರಿ ಬೀಚ್ನಲ್ಲಿ ರ್ಯಾಂಪ್ ನಿರ್ಮಿಸಿತು. ಈ ಯೋಜನೆಯಿಂದ ಉಳಿದವರಂತೆ ಇವರು ಕಡಲತೀರ ಮತ್ತಿತರ ತಾಣಗಳಲ್ಲಿ ಸಂಬಂಧಿಕರು, ಗೆಳೆಯರ ಜೊತೆ ಮೋಜು-ಮಸ್ತಿ ಮಾಡುವ ಅವಕಾಶ ಒದಗಿದೆ.
ಭಾರತದಲ್ಲಿ ಸುಮಾರು 10 ಮಿಲಿಯನ್ ವಿಕಲಚೇತನರಿದ್ದು ಎಚ್ & ಆರ್ ಜಾನ್ಸನ್ ಜನರ ಸಲಹೆಯಂತೆ ಅಧಿಕಾರಿಗಳ ಅಗತ್ಯ ಅನುಮತಿ ಪಡೆದು ರ್ಯಾಂಪ್ ನಿರ್ಮಿಸುವ ಕಾರ್ಯ ಮಾಡುತ್ತಿದೆ.
ಸದ್ಯ ಒಂದು ಬಾರಿ ಒಂದು ಸಮುದ್ರ ತೀರದಲ್ಲಿ ಈ ರಸ್ತೆ ನಿರ್ಮಾಣ ನಡೆದಿದ್ದರೂ ಈ ಯೋಜನೆ ಈಗ ಜನರಲ್ಲಿ ಬಹಳ ಸಂತಸ ಮತ್ತು ಸ್ಫೂರ್ತಿ ತಂದೊದಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.