ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ನಲ್ಲಿ ಘೋಷಿಸಿರುವ ಮಿಲಿಟರಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಭಾರತದ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ಅವರು ಇಂದು ಭಾರತದ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
“ಪ್ರಸ್ತುತ ಕ್ಷಣದಲ್ಲಿ ನಾವು ಭಾರತದ ಬೆಂಬಲಕ್ಕಾಗಿ ಮನವಿ ಮಾಡುತ್ತಿದ್ದೇವೆ. ಪ್ರಜಾಸತ್ತಾತ್ಮಕ ರಾಷ್ಟ್ರದ ವಿರುದ್ಧ ನಿರಂಕುಶ ಆಡಳಿತದ ಆಕ್ರಮಣದ ಸಂದರ್ಭದಲ್ಲಿ ಭಾರತವು ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು. ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು” ಎಂದು ಭಾರತಕ್ಕೆ ಉಕ್ರೇನ್ ರಾಯಭಾರಿ ಪೊಲಿಖಾ ಹೇಳಿದ್ದಾರೆ.
“ಪುಟಿನ್ ಯಾವ ವಿಶ್ವ ನಾಯಕರ ಮಾತು ಕೇಳುತ್ತಾರೆಂದು ನನಗೆ ತಿಳಿದಿಲ್ಲ, ಆದರೆ ಮೋದಿ ಅವರ ಸ್ಥಾನ ನನಗೆ ಆಶಾದಾಯಕವಾಗಿದೆ, ಅವರ ಬಲವಾದ ಧ್ವನಿಯ ಬಗ್ಗೆ ಪುಟಿನ್ ಕನಿಷ್ಠ ಯೋಚಿಸಬೇಕು. ನಾವು ಭಾರತ ಸರ್ಕಾರದಿಂದ ಹೆಚ್ಚು ಅನುಕೂಲಕರ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ” ಎಂದಿದ್ದಾರೆ.
ಇಂದು ಮುಂಜಾನೆಯಿಂದ ಉಕ್ರೇನ್ ಮೇಲೆ ದಾಳಿ ಪ್ರಾರಂಭವಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. “ಇಂದು ಮುಂಜಾನೆ 5 ಗಂಟೆಗೆ ಅಸ್ಪಷ್ಟ ಆಕ್ರಮಣ ಪ್ರಕರಣ ಆರಂಭವಾಗಿದೆ. ಬಹಳಷ್ಟು ಉಕ್ರೇನಿಯನ್ ಏರೋಡ್ರೋಮ್ಗಳು, ಮಿಲಿಟರಿ ವಿಮಾನ ನಿಲ್ದಾಣಗಳು, ಮಿಲಿಟರಿ ಸ್ಥಾಪನೆಗಳ ಮೇಲೆ ಬಾಂಬ್ಗಳು ಮತ್ತು ಕ್ಷಿಪಣಿ ದಾಳಿಗಳು ನಡೆದ ಮಾಹಿತಿಯನ್ನು ನಾವು ದೃಢಪಡಿಸಿದ್ದೇವೆ” ಎಂದಿದ್ದಾರೆ.
At the present moment, we're asking, pleading for support of India. In case of aggression of totalitarian regime against democratic state, India should fully assume its global role. Modi ji is one of the most powerful&respected leaders in the world: Ambassador of Ukraine to India pic.twitter.com/uB1mhOiKjA
— ANI (@ANI) February 24, 2022
#WATCH | Delhi: Dr Igor Polikha, Ambassador of Ukraine to India seeks Government of India's intervention amid #RussiaUkraineConflict; urges PM Narendra Modi to speak with Russian President Vladimir Putin. pic.twitter.com/L1b48I42DN
— ANI (@ANI) February 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.