ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಚೆನ್ನೈ-ತಿರುಚಿ-ಮಧುರೈ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ (EV) ಫಾಸ್ಟ್ ಚಾರ್ಜಿಂಗ್ ಕಾರಿಡಾರ್ಗಳನ್ನು ಪ್ರಾರಂಭಿಸಿದೆ.
ಭಾರತ್ ಪೆಟ್ರೋಲಿಯಂ ಸುಸ್ಥಿರ ಬೆಳವಣಿಗೆಗಾಗಿ ಹೊಸ ವ್ಯಾಪಾರ ವಿಭಾಗಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತಿದೆ ಮತ್ತು 7,000 ಸಾಂಪ್ರದಾಯಿಕ ಚಿಲ್ಲರೆ ಔಟ್ಲೆಟ್ಗಳನ್ನು ಮಧ್ಯಮದಿಂದ ದೀರ್ಘಾವಧಿಯವರೆಗೆ EV ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರುವ ಎನರ್ಜಿ ಸ್ಟೇಷನ್ಗಳಾಗಿ ಪರಿವರ್ತಿಸುವತ್ತ ಹೆಜ್ಜೆ ಮುಂದಿಟ್ಟಿದೆ.
“ಭಾರತ್ ಪೆಟ್ರೋಲಿಯಂ ತನ್ನ ಗ್ರಾಹಕರಿಗೆ ಅನುಕೂಲ-ಆಧಾರಿತ ಪರಿಹಾರಗಳು ಮತ್ತು ಅನುಭವಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಎಲ್ಲಾ ಪರಿಹಾರಗಳ ತಳಹದಿಯೇ ನಾವು ನೀಡುತ್ತಿರುವ ಭರವಸೆಗಳು. ವಿಶ್ವಾಸ, ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಗ್ರಾಹಕರಿಗೆ ಒದಗಿಸುವುದು ನಮ್ಮ ಗುರಿ” ಎಂದು ಸಂಸ್ಥೆ ಹೇಳಿದೆ.
ಚೆನ್ನೈ-ತಿರುಚಿ-ಮಧುರೈ ಹೆದ್ದಾರಿಯಲ್ಲಿ ಮೊದಲ ಹಂತದ ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಸ್ಥಾಪನೆಯ ನಂತರ ಸಂಸ್ಥೆಯು ಹೆಚ್ಚಿನ ವಾಹನ ದಟ್ಟಣೆಯನ್ನು ಹೊಂದಿರುವ ಪ್ರಮುಖ ಮಾರ್ಗಗಳಲ್ಲಿ ಮತ್ತಷ್ಟು ಕಾರಿಡಾರ್ ಸ್ಥಾಪನೆ ಮಾಡಲು ಉತ್ಸುಹುಕತೆಯನ್ನು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.