ನವದೆಹಲಿ: ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ಗೆ ಇನ್ನು ಮುಂದೆ 90 ದಿನಗಳ ಕಾಲ ಭಾರತೀಯ ಉದ್ಯಮಿಗಳು ವೀಸಾ ಇಲ್ಲದೆಯೇ ಪ್ರಯಾಣಿಸಬಹುದು. ವ್ಯಾಪಾರ ಉದ್ದೇಶಕ್ಕಾಗಿ ಪ್ರಯಾಣಿಸುವವರಿಗಾಗಿ ಮಾತ್ರ ಈ ಪ್ರಯೋಜನ ಸಿಗಲಿದೆ.
ಭಾರತೀಯ ವ್ಯಾಪಾರಿ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶವು ಜಾರಿಗೆ ಬಂದಿದೆ ಎಂದು ಮಾಲ್ಡೀವ್ಸ್ ಘೋಷಣೆ ಮಾಡಿದೆ.
ಮಾಲ್ಡೀವಿಯನ್ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಹೇಳಿಕೆ ಹೊರಡಿಸಿದ್ದು, ಫೆಬ್ರವರಿ 1 ರಿಂದ 90 ದಿನಗಳ ಕಾಲ ವ್ಯಾಪಾರ ಉದ್ದೇಶಗಳಿಗಾಗಿ ಭಾರತೀಯ ಪ್ರಜೆಗಳಿಗೆ ಉಚಿತ ವೀಸಾ ಪ್ರವೇಶವನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದಿದೆ.
ಇದು ಡಿಸೆಂಬರ್ 17, 2018 ರಂದು ಸಹಿ ಮಾಡಲಾದ ಎರಡೂ ಸರ್ಕಾರಗಳ ನಡುವಿನ ವೀಸಾ ಅರೇಂಜ್ಮೆಂಟ್ಗಳ ಸುಗಮಗೊಳಿಸುವ ಒಪ್ಪಂದದ ಭಾಗವಾಗಿದೆ. ಪರಸ್ಪರ ಒಪ್ಪಂದದ ಭಾಗವಾಗಿ, ಭಾರತೀಯ ಪ್ರಜೆಗಳಿಗೆ 6 ತಿಂಗಳೊಳಗೆ 90 ದಿನಗಳ ಅವಧಿಗೆ ಬಹು ಪ್ರವೇಶ, ಅನಿವಾಸಿ, ವ್ಯಾಪಾರ ವೀಸಾವನ್ನು ನೀಡಲಾಗುತ್ತದೆ. ಅನುಮೋದಿತ ವ್ಯಾಪಾರ ವೀಸಾ ಹೊಂದಿರುವ ಯಾವುದೇ ಭಾರತೀಯ ಪ್ರಜೆಗಳು ತಮ್ಮ ವೀಸಾವನ್ನು ಕ್ಯಾಲೆಂಡರ್ ವರ್ಷದಲ್ಲಿ 180 ದಿನಗಳವರೆಗೆ ನವೀಕರಿಸಲು ಅರ್ಹರಾಗಿರುತ್ತಾರೆ.
Visa-free entry into #Maldives for Indian business travellers comes into effect! @MEAIndia @IndianDiplomacy @PiyushGoyal @DoC_GoI @ficci_india @FollowCII https://t.co/IUV59VkGkn
— India in Maldives (@HCIMaldives) February 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.