ನವದೆಹಲಿ: ಈ ವರ್ಷದ ಜನವರಿವರೆಗೆ 43 ಕೋಟಿ 34 ಲಕ್ಷಕ್ಕೂ ಅಧಿಕ ಪಾನ್ ಕಾರ್ಡ್ಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನಿನ್ನೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ವಿಷಯ ತಿಳಿಸಿದ್ದಾರೆ.
ಎಲ್ಲಾ ಪಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ಗಳೊಂದಿಗೆ ಲಿಂಕ್ ಮಾಡಲು ಸಮಯ ಮಿತಿಯು ಮಾರ್ಚ್ 31, 2022 ಆಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕ್ರಿಯೆ ಒಳಗೊಂಡಿರುವ ತೊಂದರೆಗಳ ಕುರಿತು ಮಾತನಾಡಿದ ಚೌಧರಿ, ತೆರಿಗೆದಾರರು ಎದುರಿಸುತ್ತಿರುವ ಆಧಾರ್ ಕಾರ್ಡ್ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವಲ್ಲಿನ ತೊಂದರೆಗಳಿಗೆ ವಿಭಿನ್ನ ಕಾರಣಗಳಿವೆ. ಪಾನ್ ಲಿಂಕ್ ಮಾಡಲು OTP ರಶೀದಿಗಾಗಿ ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಗೆ ಸಂಬಂಧಿಸಿದಂತೆ ಪಾನ್ ಮತ್ತು ಆಧಾರ್ ವಿವರಗಳ ನಡುವೆ ಹೊಂದಾಣಿಕೆಯಾಗದಿರುವ ಕಾರಣವೂ ಸಮಸ್ಯೆ ಎದುರಾಗುತ್ತಿದೆ ಎಂದಿದ್ದಾರೆ.
ಆಧಾರ್ ಕಾರ್ಡ್ ವಿವರಗಳಲ್ಲಿ ಹೊಂದಾಣಿಕೆಯಾಗದಿದ್ದಲ್ಲಿ, ತೆರಿಗೆದಾರರು ಸಂಬಂಧಪಟ್ಟ ಪ್ರಾಧಿಕಾರದಿಂದ ಆಧಾರ್ ವಿವರಗಳನ್ನು ಸರಿಪಡಿಸಬಹುದು ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.