ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಆಗಸ್ಟ್ನಲ್ಲಿ ಚಂದ್ರಯಾನ-3 ಮಿಷನ್ ಮೂಲಕ ಚಂದ್ರನ ಬಳಿಗೆ ತನ್ನ ಮೂರನೇ ಕಾರ್ಯಾಚರಣೆಯನ್ನು ನಡೆಸಲಿದೆ. ಈ ಬಗ್ಗೆ ನಿನ್ನೆ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಚಂದ್ರಯಾನ-3ರ ಕಾರ್ಯ ಪ್ರಗತಿಯಲ್ಲಿದೆ ಮತ್ತು ಚಂದ್ರಯಾನ-2ರಿಂದ ಕಲಿತ ಕಲಿಕೆಗಳು ಮತ್ತು ರಾಷ್ಟ್ರೀಯ ಮಟ್ಟದ ತಜ್ಞರ ಸಲಹೆಗಳನ್ನು ಆಧರಿಸಿ ಮಿಷನ್ ತಂಡವು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಡಾ. ಸಿಂಗ್ ತಿಳಿಸಿದ್ದಾರೆ.
ಮಿಷನ್ ಸಂಬಂಧಿತ ಹಾರ್ಡ್ವೇರ್ ಮತ್ತು ಅವುಗಳ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಮತ್ತು ಆಗಸ್ಟ್ನಲ್ಲಿ ಚಂದ್ರಯಾನ್-3 ಅನ್ನು ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ ಎಂದು ಅವರು ಹೇಳಿದರು.
ಗಗನಯಾನ ಮತ್ತು ಆದಿತ್ಯ ಸೌರ ಮಿಷನ್ನಂತಹ ಪ್ರಮುಖ ಯೋಜನೆಗಳು ಕೂಡ ಪ್ರಕ್ರಿಯೆಯಲ್ಲಿ ಕಾರಣ ಈ ವರ್ಷ ಇಸ್ರೋ ಸಾಕಷ್ಟು ಕಾರ್ಯನಿರತವಾಗಿರಲಿದೆ. ಇಸ್ರೋ ಈ ವರ್ಷದ ಡಿಸೆಂಬರ್ವರೆಗೆ 19 ಮಿಷನ್ಗಳನ್ನು ನಡೆಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.