ನವದೆಹಲಿ: ದೇಶದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್-19 ಪ್ರಕರಣಗಳು ಮತ್ತು ಪಾಸಿಟಿವಿಟಿ ದರದಲ್ಲಿ ಇಳಿಕೆಯನ್ನು ದಾಖಲಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಂದು ಹೇಳಿದೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 100 ಪ್ರತಿಶತದಷ್ಟು ಮೊದಲ ಡೋಸ್ ಕೋವಿಡ್ ಲಸಿಕೆ ವ್ಯಾಪ್ತಿಯನ್ನು ಸಾಧಿಸಿವೆ ಮತ್ತು 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 96 ರಿಂದ 99 ಪ್ರತಿಶತದ ನಡುವೆ ಇವೆ ಎಂದಿದ್ದಾರೆ.
ಕೇರಳ ಮತ್ತು ಮಿಜೋರಾಂನಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಹೆಚ್ಚು ಪಾಸಿಟಿವಿಟಿ ದರ ಕಂಡುಬರುತ್ತಿದೆ ಎಂದಿದ್ದಾರೆ.
ಹಿಂದಿನ ಕೋವಿಡ್ ಉಲ್ಬಣದ ಸಮಯದಲ್ಲಿನ ರೋಗ ಲಕ್ಷಣಗಳಿಗೆ ಹೋಲಿಸಿದರೆ ಪ್ರಸ್ತುತ ಕೋವಿಡ್ ರೂಪಾಂತರದ ರೋಗ ಲಕ್ಷಣ ಅಪಾಯಕಾರಿಯಲ್ಲ ಎಂದು ಪ್ರಸ್ತುತ ದತ್ತಾಂಶ ಸೂಚಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈ ಹೊಸ ರೂಪಾಂತರವು ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ ಹೆಚ್ಚಿನ ತೊಡಕುಗಳು ಅಥವಾ ಸಾವಿನ ಸಾಧ್ಯತೆಗಳನ್ನು ಹೊಂದಿಲ್ಲ. ರೋಗಿಗಳಿಗೆ ದೊಡ್ಡ ಮಟ್ಟದ ಚಿಕಿತ್ಸೆ ಅಗತ್ಯ ಬೀಳುವುದಿಲ್ಲ ಎಂದಿದೆ.
ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದೆ ಮತ್ತು ಕೋವಿಡ್ ಸೋಂಕಿನ ಹರಡುವಿಕೆ ಕುಗ್ಗಿದೆ. 268 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಿದೆ ಎಂದಿದೆ.
ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಾಧ್ಯಮಗಳಿಗೆ ಮಾಹಿತಿ ನೀಡಿ, 11 ರಾಜ್ಯಗಳಲ್ಲಿ ಶಾಲೆಗಳು ಸಂಪೂರ್ಣವಾಗಿ ತೆರೆದಿವೆ, 16 ರಾಜ್ಯಗಳಲ್ಲಿ ಭಾಗಶಃ ಉನ್ನತ ತರಗತಿಗಳಿವೆ ಮತ್ತು 9 ರಾಜ್ಯಗಳಲ್ಲಿ ಶಾಲೆ ಮುಚ್ಚಲಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ 95 ಪ್ರತಿಶತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ ಮತ್ತು ಕೆಲವು ರಾಜ್ಯಗಳು 100 ಪ್ರತಿಶತ ಲಸಿಕೆ ವ್ಯಾಪ್ತಿಯನ್ನು ಸಾಧಿಸಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.