ನವದೆಹಲಿ: ಭಾರತದಲ್ಲಿ ನಕ್ಸಲ್ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಸರ್ಕಾರಗಳ ಪ್ರಯತ್ನಗಳು ಯಶ ಕಾಣುತ್ತಿವೆ. ಭದ್ರತಾ ಪಡೆಗಳ ಅವಿರತ ಪ್ರಯತ್ನಗಳ ಫಲವಾಗಿ ನಕ್ಸಲ್ ಪೀಡಿತ ಪ್ರದೇಶಗಳು ಇಂದು ನೆಮ್ಮದಿ ಕಾಣುತ್ತಿವೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತಿದೆ. ಇನ್ನೊಂದೆಡೆ ನಕ್ಸಲ್ ನಾಯಕರು ಪೊಲೀಸರಿಗೆ ಶರಣಾಗುತ್ತಿದ್ದಾರೆ.
ನಕ್ಸಲ್ ನಾಯಕ ಮದ್ವಿ ಹಿದ್ಮಾ ತೆಲಂಗಾಣ ಪೊಲೀಸರು ಮತ್ತು ಸಿಆರ್ಪಿಎಫ್ ಮುಂದೆ ನಿನ್ನೆ ಶರಣಾಗಿದ್ದಾನೆ. ಛತ್ತೀಸ್ಗಢ ಮೂಲದ 25 ವರ್ಷದ ಹಿದ್ಮಾ ನಿನ್ನೆ ತೆಲಂಗಾಣದ ಮುಲುಗು ಎಂಬಲ್ಲಿ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈತನ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಛತ್ತೀಸ್ಗಢ ಪೊಲೀಸರು ಘೋಷಿಸಿದ್ದರು. ಛತ್ತೀಸ್ಗಢದ ಬಿಜಾಪುರದಲ್ಲಿ ಏಪ್ರಿಲ್ 2021 ರ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ ಎಂದು ಶಂಕಿಸಲಾಗಿದೆ. ಈ ಘಟನೆಯಲ್ಲಿ 22 ಸಿಬ್ಬಂದಿ ಹುತಾತ್ಮರಾಗಿದ್ದರು.
ಹಿದ್ಮಾ ಭದ್ರತಾ ಪಡೆಗಳು ಮತ್ತು ರಾಜಕೀಯ ನಾಯಕರ ಮೇಲಿನ ಹಲವಾರು ದಾಳಿಗಳ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.