ನವದೆಹಲಿ: ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ದಾಖಲೆ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುಟ್ಯೂಬ್ನಲ್ಲೂ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.
ಮಂಗಳವಾರ ಅವರ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರರನ್ನು ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಪ್ರಧಾನಿ ಮೋದಿ ಈಗ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಸೇರಿದಂತೆ ವಿಶ್ವದಾದ್ಯಂತದ ಅತಿದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿರುವ ನಾಯಕರಲ್ಲಿಅಗ್ರಗಣ್ಯರಾಗಿದ್ದಾರೆ.
ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಿರುವ ಬಳಕೆದಾರರ ಸಂಖ್ಯೆಯನ್ನು ಇತರ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಹೋಲಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ ಅವರು ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಪ್ರಧಾನಿ 1 ಕೋಟಿ ಚಂದಾದಾರರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜೈರ್ ಬೋಲ್ಸನಾರೊ 36 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ 30.7 ಚಂದಾದಾರರನ್ನು ಹೊಂದಿದ್ದಾರೆ.
ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ವಿಶ್ವ ನಾಯಕರ ಪಟ್ಟಿ ಇಂತಿದೆ:
ನರೇಂದ್ರ ಮೋದಿ – 1 ಕೋಟಿ
ಜೈರ್ ಬೋಲ್ಸನಾರೊ (ಬ್ರೆಜಿಲ್) – 36 ಲಕ್ಷ
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಮೆಕ್ಸಿಕೊ) – 30.7 ಲಕ್ಷ
ವೈಟ್ ಹೌಸ್ – 19 ಲಕ್ಷ
ಜೋ ಬೈಡೆನ್ (ಯುಎಸ್) – 7 ಲಕ್ಷ
ಭಾರತೀಯ ನಾಯಕರು ಹೊಂದಿದ ಚಂದಾದಾರರ ಪಟ್ಟಿ:
ರಾಹುಲ್ ಗಾಂಧಿ – 5.25 ಲಕ್ಷ
ಶಶಿ ತರೂರ್ – 4.39 ಲಕ್ಷ
ಅಸಾದುದ್ದೀನ್ ಓವೈಸಿ – 3.7 ಲಕ್ಷ
ಎಂಕೆ ಸ್ಟಾಲಿನ್ – 2.12 ಲಕ್ಷ
YouTube Subscribers of Narendra Modi channel cross 1 crore
•Jair Bolsonaro (Brazil) –36L
•Andrés Manuel López Obrador (Mexico) –30.7L
•White House –19L
•Joe Biden –7L•Rahul Gandhi: 5.25L
•Shashi Tharoor: 4.39L
•Asaduddin Owaisi –3.7L
•MK Stalin – 2.12L pic.twitter.com/ymvPg4C5xK— Shehzad Jai Hind (@Shehzad_Ind) February 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.