ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ 19 ವರ್ಷದ ಮಿರಾಮ್ ಟ್ಯಾರೋನ್ ಎಂಬ ಯುವಕನ್ನು ಚೀನಾ ಸೇನೆ ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ನಾಪತ್ತೆಯಾದ ಒಂದು ವಾರಗಳ ನಂತರ ಆತನನ್ನು ಹಸ್ತಾಂತರ ಮಾಡಲಾಗಿದೆ.
ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಗುರುವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ.
“ಚೀನಾದ ಪಿಎಲ್ಎ ಅರುಣಾಚಲ ಪ್ರದೇಶದ ಮಿರಾಮ್ ತರನ್ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಜನವರಿ 18 ರಂದು ಅರುಣಾಚಲ ಪ್ರದೇಶದಲ್ಲಿ ಮಿರಾಮ್ ಟ್ಯಾರೋನ್ ನಾಪತ್ತೆಯಾಗಿದ್ದ. ಆತ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ ನಿವಾಸಿಯಾಗಿದ್ದಾನೆ.
ಈತ ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಬರಲಿದ್ದಾನೆ ಎಂದು ರಿಜಿಜು ಬುಧವಾರ ಖಚಿತಪಡಿಸಿದ್ದರು.
“ಅರುಣಾಚಲ ಪ್ರದೇಶದ ಯುವ ಭಾರತೀಯ ಮಿರಾಮ್ ಟ್ಯಾರೋನ್ ಅವರನ್ನು ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ಚೈನೀಸ್ ಪಿಎಲ್ಎ ಖಚಿತಪಡಿಸಿದೆ” ಎಂದಿದ್ದರು.
ಕಳೆದ ವಾರ, ಭಾರತೀಯ ಸೇನೆಯು ಗುರುತಿಗಾಗಿ ಯುವಕರ ವೈಯಕ್ತಿಕ ವಿವರಗಳನ್ನು ಚೀನಾದ ಕಡೆಯಿಂದ ಹಂಚಿಕೊಂಡಿತ್ತು.
The Chinese PLA handed over the young boy from Arunachal Pradesh Shri Miram Taron to Indian Army at WACHA-DAMAI interaction point in Arunachal Pradesh today.
I thank our proud Indian Army for pursuing the case meticulously with PLA and safely securing our young boy back home 🇮🇳 pic.twitter.com/FyiaM4wfQk— Kiren Rijiju (@KirenRijiju) January 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.