ಲಡಾಖ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ 11,000 ಅಡಿ ಎತ್ತರದಲ್ಲಿ ತನ್ನ ಮೊದಲ ತೆರೆದ ಸಿಂಥೆಟಿಕ್ ಟ್ರ್ಯಾಕ್ ಮತ್ತು ಫುಟ್ಬಾಲ್ ಟರ್ಫ್ ಅನ್ನು ಪಡೆದುಕೊಂಡಿದೆ. ಇದು ಲಡಾಖ್ ಕ್ರೀಡಾಪಟುಗಳ ಉತ್ಸಾಹವನ್ನು ಹೆಚ್ಚಿಸಿದೆ.
ಇದನ್ನು 10.68 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ‘ಶೀತ ಮರುಭೂಮಿ’ಯ ಸ್ಪಿಟುಕ್ ಬೆಲ್ಟ್ನಲ್ಲಿ 130 ಕೆನಾಲ್ಗಳ ಮೇಲೆ ಟ್ರ್ಯಾಕ್ ಮತ್ತು ಫುಟ್ಬಾಲ್ ಟರ್ಫ್ ಅನ್ನು ನಿರ್ಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಆಗಿನ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಸೆಪ್ಟೆಂಬರ್ 2020 ರಲ್ಲಿ ಈ ಸೌಲಭ್ಯಕ್ಕೆ ಅಡಿಪಾಯವನ್ನು ಹಾಕಿದ್ದರು.
“ನಾನು ಇಲ್ಲಿ ಮ್ಯಾರಥಾನ್ ಓಟಗಾರರಿಗೆ ತರಬೇತುದಾರನಾಗಿದ್ದೇನೆ. ಇದಕ್ಕೂ ಮೊದಲು ನಾವು ರಸ್ತೆಗಳಲ್ಲಿ ಓಡಬೇಕಾಗಿತ್ತು. ಈಗ, ನಾವು ಸುಧಾರಣೆಗೆ ಸಾಕ್ಷಿಯಾಗಿದ್ದೇವೆ. ಏಕೆಂದರೆ ನಾವು ಈಗ ದೂರ ಮತ್ತು ವೇಗವನ್ನು ಸುಲಭವಾಗಿ ಅಳೆಯಬಹುದು” ಎಂದು ತ್ಸೆರಿಂಗ್ ಸ್ಟೋಬ್ಗ್ಯಾಸ್ ಸಂತೋಷದಿಂದ ಹೇಳಿದ್ದಾರೆ
ಪ್ರಸ್ತುತ ಕಾನೂನು ಮತ್ತು ನ್ಯಾಯ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ರಿಜಿಜು ಅವರು “ಸಾಂಕ್ರಾಮಿಕ ರೋಗದ ಹೊರತಾಗಿಯೂ ಕೇವಲ ಎರಡು ವರ್ಷಗಳಲ್ಲಿ ಲಡಾಖ್ನಲ್ಲಿ ಕ್ರೀಡಾ ಯೋಜನೆಗಳು ಪೂರ್ಣಗೊಂಡಿರುವುದನ್ನು ನೋಡುವುದು ತುಂಬಾ ತೃಪ್ತಿ ತಂದಿದೆ. ಶೀಘ್ರವಾಗಿ ಕಾರ್ಯಗತಗೊಳಿಸಲು ಪ್ರಧಾನಿ ಮೋದಿ ಸ್ಪಷ್ಟ ನಿರ್ದೇಶನ ನೀಡಿದರು. ಎಲ್ಲಾ ಯೋಜನೆಗಳು ಸಮಯಕ್ಕೆ ಸರಿಯಾಗಿ ಆಗಿವೆ. ಇವುಗಳಿಗೆ ಖೇಲೋ ಇಂಡಿಯಾ ಸ್ಕೀಮ್ ಅಡಿಯಲ್ಲಿ ಹಣ ನೀಡಲಾಗುತ್ತಿದೆ” ಎಂದಿದ್ದಾರೆ.
ಕಳೆದ ವಾರ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಟ್ವಿಟರ್ನಲ್ಲಿ ಫುಟ್ಬಾಲ್ ಕ್ರೀಡಾಂಗಣದ ಚಿತ್ರವನ್ನು ಹಂಚಿಕೊಂಡು, “ಇದು ಹೊಸ ಭಾರತ – ಖೇಲೋ ಇಂಡಿಯಾ ಕ್ರೀಡಾ ಮೂಲಸೌಕರ್ಯದ ಭಾಗವಾಗಿ ಧನಸಹಾಯ ನೀಡಲಾಗಿದೆ. ಲೇಹ್ನ ಸ್ಪಿಟುಕ್ನಲ್ಲಿ ಸುಮಾರು 11,000 ಅಡಿ ಎತ್ತರದಲ್ಲಿ ಓಪನ್ ಸ್ಟೇಡಿಯಂ” ಎಂದು ಬರೆದಿದ್ದಾರೆ.
This is NEW INDIA 🇮🇳
✅ Funded as part of Khelo India sports infrastructure
✅ Open Stadium at Spituk, Leh
✅ Height 11,000ft approx| via @TravelingBharat | pic.twitter.com/ynVZjcsiu4
— Office of Mr. Anurag Thakur (@Anurag_Office) January 15, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.