ನವದೆಹಲಿ: ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ದೊಡ್ಡ ಉತ್ತೇಜನ ದೊರೆಯುತ್ತಿದೆ. ಈ ಯೋಜನೆಯಡಿ ಆ್ಯಪಲ್ ಮತ್ತು ಸ್ಯಾಮ್ಸಂಗ್ 2021-22ರ ಹಣಕಾಸು ವರ್ಷದಲ್ಲಿ ಸುಮಾರು ರೂ 37,000 ಕೋಟಿ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ಸ್ಥಳೀಯವಾಗಿ ತಯಾರಿಸುವ ಸಾಧ್ಯತೆಯಿದೆ.
ಈ ಎರಡು ಕಂಪನಿಗಳು ಕೇಂದ್ರ ಸರ್ಕಾರವು ನಿಗದಿಪಡಿಸಿದ ಸ್ಮಾರ್ಟ್ಫೋನ್ ಪಿಎಲ್ಐ ಗುರಿಗಳನ್ನು ಶೇಕಡಾ 50 ಕ್ಕಿಂತ ಹೆಚ್ಚು ಮೀರಲು ಸಿದ್ಧವಾಗಿವೆ.
“ಈ ಜಾಗತಿಕ ಕಂಪನಿಗಳು ಈ ವರ್ಷ ತಮ್ಮ ಗುರಿಗಳನ್ನು ಮೀರುವ ನಿರೀಕ್ಷೆಯಿದೆ ಮತ್ತು ಪ್ರತಿ ವರ್ಷ ಸಂಖ್ಯೆಗಳು ಸುಧಾರಿಸುತ್ತಲೇ ಇರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿತ್ತವರ್ಷ 2022ಕ್ಕಾಗಿ ಸರ್ಕಾರದ ಗುರಿಯು ಅರ್ಹ ಅಭ್ಯರ್ಥಿಗಳಿಗೆ $3.2 ಬಿಲಿಯನ್ ಸಮೀಪದಲ್ಲಿದೆ ಎಂದು ಅಧಿಕೃತ ವರದಿ ತಿಳಿಸಿದೆ.
ಇದಲ್ಲದೆ, ಒಟ್ಟು ಉತ್ಪಾದನೆಯಲ್ಲಿ ಸುಮಾರು $2 ಬಿಲಿಯನ್ ಮೌಲ್ಯದ ಮೊಬೈಲ್ ಫೋನ್ಗಳನ್ನು ವಿತ್ತವರ್ಷ 2022 ರಲ್ಲಿ ಯೋಜನೆಯ ಅಡಿಯಲ್ಲಿ ದೇಶದಿಂದ ರಫ್ತು ಮಾಡಲಾಗುತ್ತದೆ.
ಆ್ಯಪಲ್ನ ಎರಡನೇ ಅತಿದೊಡ್ಡ ಜಾಗತಿಕ ತಯಾರಕ ಪೆಗಾಟ್ರಾನ್ ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ
ಸತತ ಎರಡನೇ ವರ್ಷ ಯೋಜನೆಯಡಿಯಲ್ಲಿ ಪ್ರೋತ್ಸಾಹಕಗಳನ್ನು ಪಡೆಯುವ ಏಕೈಕ ಕಂಪನಿ ಸ್ಯಾಮ್ಸಂಗ್. ದಕ್ಷಿಣ ಕೊರಿಯಾದ ಸಂಸ್ಥೆಯು ವಿತ್ತವರ್ಷ 2021ರಲ್ಲಿ ರೂ 900 ಕೋಟಿ ಮೌಲ್ಯದ ಪ್ರೋತ್ಸಾಹಕಗಳನ್ನು ಪಡೆದುಕೊಂಡಿದೆ.
ಆ್ಯಪಲ್ನ ಗುತ್ತಿಗೆ ತಯಾರಕರಾದ ಫಾಕ್ಸ್ಕಾನ್ನ ಹೋನ್ ಹೈ ಮತ್ತು ವಿಸ್ಟ್ರಾನ್ ಈ ವರ್ಷ ಮೊದಲ ಬಾರಿಗೆ ಪ್ರೋತ್ಸಾಹಕಗಳನ್ನು ಪಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.