ನವದೆಹಲಿ: ಒಂದು ದಶಕದಲ್ಲಿ ಸೇವಾ ರಫ್ತುಗಳನ್ನು ವರ್ಷಕ್ಕೆ ಒಂದು ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವಲ್ಲಿ ಐಟಿ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಐಟಿ ಉದ್ಯಮದ ನಾಯಕರೊಂದಿಗೆ ಭಾನುವಾರ ವರ್ಚುವಲ್ ಸಭೆ ನಡೆಸಿ ಮಾತನಾಡಿ ಗೋಯಲ್, ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮೂಲಕ ಐಟಿ ಉದ್ಯಮವು ದೊಡ್ಡ ಜಾಗತಿಕ ಕೊಡುಗೆದಾರನಾಗಬಹುದು. ರಫ್ತು ಹೆಚ್ಚಿಸಲು ಐಟಿ ಸಂಸ್ಥೆಗಳಿಗೆ ಸರ್ಕಾರ ಎಲ್ಲಾ ಸಹಾಯವನ್ನು ನೀಡುತ್ತದೆ. ಈ ವರ್ಷ ಭಾರತವು ತನ್ನ ಸರಕು ರಫ್ತು ಗುರಿಯನ್ನು 400 ಶತಕೋಟಿ ಡಾಲರ್ಗೆ ತಲುಪಿಸುವ ಹಾದಿಯಲ್ಲಿದೆ. ಸೇವೆಗಳ ರಫ್ತು ಸುಮಾರು 250 ಶತಕೋಟಿ ಡಾಲರ್ ತಲುಪಬಹುದು ಎಂದಿದ್ದಾರೆ.
ಕೇಂದ್ರ ಸರ್ಕಾರವು ಐಟಿ ವಲಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಮತ್ತು ಒಂದು ದಶಕದಲ್ಲಿ ಭಾರತದ ಸೇವಾ ರಫ್ತು ಒಂದು ಟ್ರಿಲಿಯನ್ ಡಾಲರ್ಗೆ ವೃದ್ಧಿಸುವುದಕ್ಕೆ ಸಹಕಾರ ನೀಡುತ್ತದೆ ಎಂದು ಭಾರತದ ಉನ್ನತ ಐಟಿ ಕಂಪನಿಗಳ ನಾಯಕರಿಗೆ ಗೋಯಲ್ ಭರವಸೆ ನೀಡಿದ್ದಾರೆ.
ಹೈಟೆಕ್ ಉತ್ಪನ್ನಗಳತ್ತ ಗಮನ ಹರಿಸಬೇಕು ಎಂದು ಐಟಿ ಉದ್ಯಮಿಗಳಿಗೆ ಸಲಹೆ ನೀಡಿದ ಅವರು, ಐಟಿ ಉದ್ಯಮವು ತನ್ನದೇ ಬಲದಲ್ಲಿ ಅದ್ಭುತವಾಗಿ ಬೆಳೆದಿದೆ ಮತ್ತು ಭಾರತವು ಸ್ಟಾರ್ಟ್ಅಪ್ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಗಮನ ಹರಿಸದ ಸಮಯದಲ್ಲೂ ಅನೇಕ ಉನ್ನತ ಕಂಪನಿಗಳು ಬೆಳೆದವು ಎಂದಿದ್ದಾರ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (DPIIT) IT ಉದ್ಯಮವು ವೇಗವಾಗಿ ಬೆಳೆಯಲು ಸಹಾಯ ಮಾಡಲು ಮತ್ತು ಭಾರತದ ಸೇವೆಗಳ ರಫ್ತಿಗೆ ಕೊಡುಗೆ ನೀಡಲು ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ವರ್ಚುವಲ್ ಸಭೆಯಲ್ಲಿ ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್, ಟೆಕ್ ಮಹೀಂದ್ರ ಸಿಇಒ ಮತ್ತು ಎಂಡಿ ಸಿ.ಪಿ. ಗುರ್ನಾನಿ, ಎಂಫಾಸಿಸ್ ಸಿಇಒ ನಿತಿನ್ ರಾಕೇಶ್, ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ, WNS ಗ್ಲೋಬಲ್ ಸರ್ವಿಸಸ್ ಗ್ರೂಪ್ ಸಿಇಒ ಕೇಶವ್ ಆರ್ ಮುರುಗೇಶ್, ಮಾಸ್ಟೆಕ್ ಸಿಇಒ ಹಿರಾಲ್ ಚಂದ್ರನಾ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಲ್ಲಿ ವ್ಯಾಪಾರ ಮತ್ತು ತಂತ್ರಜ್ಞಾನ ಸೇವೆಗಳ ಮುಖ್ಯಸ್ಥ ಕೃಷ್ಣನ್ ರಾಮಾನುಜಮ್ ಸೇರಿದಂತೆ ಹಲವು ದಿಗ್ಗಜರು ಇದರಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.