ನ್ಯೂಯಾರ್ಕ್: ಪಾಕಿಸ್ಥಾನದಲ್ಲಿ ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ತೃತೀಯಲಿಂಗಿಗಳು ಹಿಂಸೆ, ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸುತ್ತಲೇ ಇದ್ದಾರೆ. ಅಧಿಕಾರಿಗಳು ಅವರಿಗೆ ಸೂಕ್ತ ರಕ್ಷಣೆ ನೀಡಲು ಅಥವಾ ಅಪರಾಧಿಗಳನ್ನು ಮಟ್ಟ ಹಾಕಲು ವಿಫಲರಾಗಿದ್ದಾರೆ ಎಂದು ಅಮೆರಿಕಾ ಮೂಲದ ಹಕ್ಕುಗಳ ಸಂಘಟನೆ ಹೇಳಿದೆ.
ಕಳೆದ ವಾರ ಬಿಡುಗಡೆಯಾದ ವಿಶ್ವ ವರದಿ 2022 ರಲ್ಲಿ, ಹ್ಯೂಮನ್ ರೈಟ್ಸ್ ವಾಚ್ (HRW) ಪಾಕಿಸ್ಥಾನದ ನಾಗರಿಕ ಸ್ವಾತಂತ್ರ್ಯ ಹರಣದ ಚಿತ್ರಣವನ್ನು ಬಹಿರಂಗಪಡಿಸಿದೆ.
ವರದಿಯ ಪ್ರಕಾರ, ಚಿತ್ರಹಿಂಸೆ ಮತ್ತು ಇತರ ಗಂಭೀರ ನಿಂದನೆಗಳಿಗೆ ಕಾನೂನು ಜಾರಿ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಪಾಕಿಸ್ಥಾನಿ ಸರ್ಕಾರ ವಿಫಲವಾಗಿದೆ ಎಂದಿದೆ.
ಇಸ್ಲಾಮಿ ಉಗ್ರಗಾಮಿಗಳು, ವಿಶೇಷವಾಗಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ಥಾನದ ಮೂಲಭೂತವಾದಿಗಳು ಕಾನೂನು ಜಾರಿ ಅಧಿಕಾರಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳಿಂದಾಗಿ ಅನೇಕ ಜನರು ಸಾವಿಗೀಡಾಗಿದ್ದಾರೆ ಎಂದು HRW ವರದಿ ಹೇಳಿದೆ.
ಪಾಕ್ ಮಾಧ್ಯಮಗಳು ಭಯದ ವಾತಾವರಣದಲ್ಲಿದ್ದು, ಸರ್ಕಾರಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ ಗುಂಪುಗಳಿಂದ ಬೆದರಿಕೆ ಮತ್ತು ದಾಳಿಗಳನ್ನು ಎದುರಿಸುತ್ತಿವೆ. ಪತ್ರಕರ್ತರು ಸ್ವಯಂ ಸೆನ್ಸಾರ್ಶಿಪ್ಗೆ ಹೆಚ್ಚು ಆಶ್ರಯಿಸಿದ್ದಾರೆ ಎಂದು HRW ಹೇಳಿದೆ.
ಅತ್ಯಾಚಾರ, ಕೊಲೆ, ಆಸಿಡ್ ದಾಳಿಗಳು, ಕೌಟುಂಬಿಕ ಹಿಂಸೆ ಮತ್ತು ಬಲವಂತದ ಮದುವೆ ಸೇರಿದಂತೆ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧದ ಹಿಂಸಾಚಾರವು ಪಾಕಿಸ್ಥಾನದಾದ್ಯಂತ ನಡೆಯುತ್ತಿದೆ. ಪ್ರತಿ ವರ್ಷ ಸುಮಾರು 1,000 ಮಹಿಳೆಯರು ಮರ್ಯಾದಾ ಹತ್ಯೆಗಳಲ್ಲಿ ಕೊಲ್ಲಲ್ಪಡುತ್ತಿದ್ದಾರೆ ಎಂದು ವರದಿ ಅಂದಾಜಿಸಿದೆ.
ಇದಲ್ಲದೆ, ಬಾಲ್ಯವಿವಾಹವು ಪಾಕಿಸ್ಥಾನದಲ್ಲಿ ಗಂಭೀರ ಸಮಸ್ಯೆಯಾಗಿ ಉಳಿದಿದೆ, 18 ಪ್ರತಿಶತದಷ್ಟು ಹುಡುಗಿಯರು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಾರೆ ಮತ್ತು 4 ಪ್ರತಿಶತದಷ್ಟು ಜನರು 15 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರು ವಿಶೇಷವಾಗಿ ಬಲವಂತದ ಮದುವೆಗೆ ಗುರಿಯಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.