ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ತನ್ನ 64 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. 1958 ರಲ್ಲಿ ಈ ದಿನದಂದು ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಮತ್ತು ವಿಶೇಷವಾಗಿ ಮಿಲಿಟರಿ ತಂತ್ರಜ್ಞಾನಗಳಲ್ಲಿ ಬಲಿಷ್ಠ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ಡಿಆರ್ಡಿಒ ಅನ್ನು ಸ್ಥಾಪಿಸಲಾಯಿತಿ.
63 ವರ್ಷಗಳ ಅವಧಿಯಲ್ಲಿ ಸಂಸ್ಥೆಯು ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಭೂದೃಶ್ಯವನ್ನು ಮಾರ್ಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಆರ್ಡಿಒ ಅಧ್ಯಕ್ಷ ಡಾ ಜಿ.ಸತೀಶ್ ರೆಡ್ಡಿ, ಕೋವಿಡ್- 19 ನಿಂದಾಗಿ ಉಂಟಾದ ಕಠಿಣ ಪರಿಸ್ಥಿತಿಯಲ್ಲೂ ಕಳೆದ ವರ್ಷವು ಡಿಆರ್ಡಿಒಗೆ ಪ್ರಮುಖ ಪ್ರಗತಿ ಮತ್ತು ಸಾಧನೆಗಳ ವರ್ಷವಾಗಿದೆ ಎಂದು ಹೇಳಿದರು.
ಕೋವಿಡ್- 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಡಿಆರ್ಡಿಒ ಪಾತ್ರದ ಕುರಿತು ಮಾತನಾಡಿದ ಅವರು, ಪಿಎಂ ಕೇರ್ಸ್ ನಿಧಿಯ ಸಹಾಯದಿಂದ ಡಿಆರ್ಡಿಒ 850 ಕ್ಕೂ ಹೆಚ್ಚು ಆಮ್ಲಜನಕ ಘಟಕಗಳನ್ನು ಸ್ಥಾಪಿಸಿದೆ ಮತ್ತು ದೇಶಾದ್ಯಂತ ಅನೇಕ ಕೋವಿಡ್ ಕೇಂದ್ರಿತ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ, ಜೊತೆಗೆ 2 ಡಿಜಿ ಎಂಬ ಔಷಧವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
2021 ರಲ್ಲಿ ಕಳೆದ ಒಂದು ವರ್ಷದಲ್ಲಿ 175 ಕ್ಕೂ ಹೆಚ್ಚು ತಂತ್ರಜ್ಞಾನಗಳ ವರ್ಗಾವಣೆಯೊಂದಿಗೆ ಅಭಿವೃದ್ಧಿ ಮತ್ತು ಉತ್ಪಾದನೆಯ ವಿಷಯದಲ್ಲಿ ದೇಶದಲ್ಲಿ ರಕ್ಷಣಾ ಉದ್ಯಮದೊಂದಿಗಿನ ಸಮನ್ವಯವು ಹೊಸ ಎತ್ತರಕ್ಕೆ ತಲುಪಿದೆ ಎಂದು ಡಾ ಜಿ ಸತೀಶ್ ರೆಡ್ಡಿ ಹೇಳಿದ್ದಾರೆ.
ಡಿಆರ್ಡಿಒ ಸಂಸ್ಥೆಯು ದೇಶದ ವಿದ್ಯಾರ್ಥಿಗಳಲ್ಲಿ ರಕ್ಷಣಾ ಅಧ್ಯಯನವನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಕ್ರಮಗಳನ್ನು ಪ್ರಾರಂಭಿಸಿದೆ ಎಂದಿದ್ದಾರೆ.
ಭಾರತವನ್ನು ಆತ್ಮ ನಿರ್ಭರ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ಪಷ್ಟವಾದ ಕರೆ ಕುರಿತು ಮಾತನಾಡಿದ ಅವರು, ಮುಂದಿನ ವರ್ಷಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಉತ್ಪಾದನೆಯ ಕ್ಷೇತ್ರದಲ್ಲಿ ದೇಶವನ್ನು ವಿಶ್ವ ನಾಯಕ ಮತ್ತು ನಿವ್ವಳ ರಫ್ತುದಾರನನ್ನಾಗಿ ಮಾಡುವ ತಮ್ಮ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.