ನವದೆಹಲಿ: 15 ರಿಂದ 18 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ನೀಡಲು ಇಂದಿನಿದ Co-WIN ಪೋರ್ಟಲ್ನಲ್ಲಿ ನೋಂದಣಿ ಪ್ರಾರಂಭವಾಗುತ್ತಿದೆ.
ಫಲಾನುಭವಿಗಳು ವಾಕ್-ಇನ್ ನೋಂದಣಿ ಸೌಲಭ್ಯವನ್ನು ಸಹ ಪಡೆಯಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಡಿಸೆಂಬರ್ 25 ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಮಂತ್ರಿ ಅವರು 15 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆಯನ್ನು ಮುಂದಿನ ತಿಂಗಳ ಮೂರನೇ ತಾರೀಖಿನಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದರು.
ದುರ್ಬಲ ಜನಸಂಖ್ಯೆಗೆ ಮುನ್ನೆಚ್ಚರಿಕೆಯ ಮೂರನೇ ಡೋಸ್ ನೀಡಿಕೆ ಜನವರಿ 10 ರಿಂದ ಪ್ರಾರಂಭವಾಗುತ್ತದೆ.
ಸಂಭಾವ್ಯ ಫಲಾನುಭವಿಗಳಿಗೆ ವ್ಯಾಕ್ಸಿನೇಷನ್ನ ರೋಲ್-ಔಟ್ ಅನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದಲ್ಲಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇಲ್ಲಿಯವರೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 150 ಕೋಟಿ 66 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ಗಳನ್ನು ಒದಗಿಸಲಾಗಿದೆ. ಸುಮಾರು 16 ಕೋಟಿ 94 ಲಕ್ಷ ಬಳಕೆಯಾಗದ ಲಸಿಕೆ ಡೋಸ್ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿವೆ ಎಂದು ಸಚಿವಾಲಯ ತಿಳಿಸಿದೆ.
ಕೋವಿನ್ ಪ್ಲಾಟ್ಫಾರ್ಮ್ ಮುಖ್ಯಸ್ಥ ಡಾ ಆರ್ ಎಸ್ ಶರ್ಮಾ ಮಾತನಾಡಿ, ಮೂರನೇ ಲಸಿಕೆಗೆ ನೋಂದಾಯಿಸುವ ಬಯಸುವವರು ಒಂಬತ್ತು ತಿಂಗಳ ಮೊದಲು ಎರಡನೇ ಡೋಸ್ ಲಸಿಕೆಯನ್ನು ಪಡೆದ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಆಗ ಮಾತ್ರ ಕೋವಿಡ್ ಲಸಿಕೆಯ ಮೊದಲ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆ ಎಂದಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.