ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ 2021ರ ಸಾಲಿನಲ್ಲಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದ ಬಾಧಿತವಾದ ಆರು ರಾಜ್ಯಗಳಿಗೆ ಹೆಚ್ಚುವರಿ ಕೇಂದ್ರೀಯ ನೆರವನ್ನು ಅನುಮೋದಿಸಿದೆ. ಪ್ರಕೃತಿ ವಿಕೋಪವನ್ನು ಎದುರಿಸಿದ ಆರು ರಾಜ್ಯಗಳ ಜನರಿಗೆ ನೆರವಾಗುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೃಢ ನಿಶ್ಚಯವನ್ನು ಇದು ತೋರಿಸುತ್ತದೆ.
ಎಚ್.ಎಲ್.ಸಿ. 3,063.21 ಕೋಟಿ ರೂ. ಹೆಚ್ಚುವರಿ ಕೇಂದ್ರೀಯ ನೆರವನ್ನು ಎನ್.ಡಿ.ಆರ್.ಎಫ್.ನಿಂದ ಅನುಮೋದಿಸಿದೆ:
ಚಂಡಮಾರುತ ‘ತೌಕ್ತೆ’ ಗಾಗು ರೂ.1,133.35 ಕೋಟಿಯನ್ನು ಗುಜರಾತಿಗೆ, ಚಂಡಮಾರುತ ‘ಯಾಸ್’ಗಾಗಿ ರೂ.586.59 ಕೋಟಿಯನ್ನು ಪಶ್ಚಿಮ ಬಂಗಾಳಕ್ಕೆ, 2021ರ ಮುಂಗಾರು ಋತುವಿನಲ್ಲಿ ಪ್ರವಾಹ /ಭೂಕುಸಿತಕ್ಕೆ ರೂ. 51.53 ಕೋಟಿ ಅಸ್ಸಾಂಗೆ, ರೂ. 504.06 ಕೋಟಿಯನ್ನು ಕರ್ನಾಟಕಕ್ಕೆ, ರೂ. 600.50 ಕೋಟಿ ಮಧ್ಯಪ್ರದೇಶಕ್ಕೆ ಮತ್ತು ರೂ. 187.18 ಕೋಟಿಯನ್ನು ಉತ್ತರಖಂಡಕ್ಕೆ ಅನುಮೋದಿಸಲಾಗಿದೆ.
ಈ ಹೆಚ್ಚುವರಿ ನೆರವು, ಈಗಾಗಲೇ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್.ಡಿ.ಆರ್.ಎಫ್)ನಡಿ ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಲಾಗಿರುವ ನಿಧಿಗಿಂತ ಹೆಚ್ಚುವರಿಯಾದುದಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ಎಸ್.ಡಿ.ಆರ್.ಎಫ್.ನಡಿ 17,747.20 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಎನ್.ಡಿ.ಆರ್.ಎಫ್.ನಿಂದ 7 ರಾಜ್ಯಗಳಿಗೆ 3,543.54 ಕೋಟಿ ರೂ. ಬಿಡುಗಡೆ ಮಾಡಿದೆ.
‘ತೌಕ್ತೆ’ ಮತ್ತು ‘ಯಾಸ್’ ಚಂಡಮಾರುತದ ತರುವಾಯ 20.05.2021ರಂದು ಎನ್.ಡಿ.ಆರ್.ಎಫ್. ನಿಂದ ಗುಜರಾತ್ ಗೆ 1,000 ಕೋಟಿ ರೂ. ಮತ್ತು 29.05.2021 ರಂದು ಪಶ್ಚಿಮ ಬಂಗಾಳಕ್ಕೆ 300 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿತ್ತು.
2021-22ರ ಸಾಲಿನಲ್ಲಿ, ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪ ಪೀಡಿತ ರಾಜ್ಯ ಸರ್ಕಾರಗಳಿಂದ ಜ್ಞಾಪನಾ ಪತ್ರದ ಸ್ವೀಕೃತಿಗೆ ಕಾಯದೆ, ಪ್ರಕೃತಿ ವಿಕೋಪಗಳಾದ ನಂತರ ತಕ್ಷಣವೇ 22 ಅಂತರ-ಸಚಿವಾಲಯದ ಕೇಂದ್ರೀಯ ತಂಡಗಳನ್ನು (ಐ.ಎಂ.ಸಿ.ಟಿ.ಗಳು) ನಿಯುಕ್ತಿಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.