ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಸೆ. 7ರಿಂದ 11ರ ವರೆಗೆ ಯುಜಿಸಿ ಪ್ರಾಯೋಜಿತ “ಪ್ರಾಯೋಗಿಕ ಉಪಕರಣಗಳ ಸಮರ್ಪಕ ಬಳಕೆ ಹಾಗೂ ನಿರ್ವಹಣೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರ ಏರ್ಪಡಿಸಿದೆ.
ಮುಂಬೈ ವಿಶ್ವವಿದ್ಯಾಲಯದ ವೆಸ್ಟರ್ನ್ ರೀಜನಲ್ ಇನ್ಸ್ಟ್ರೆಮೆಂಟೇಶನ್ ಸೆಂಟರ್ನ ತಾಂತ್ರಿಕ ನೆರವಿನಿಂದ ಪದವಿ ಕಾಲೇಜುಗಳ ರಸಾಯನಶಾಸ್ತ್ರ ಅಧ್ಯಾಪಕರು, ಪ್ರಯೋಗಾಲಯ ತಜ್ಞರಿಗೆ 3 ದಿನಗಳ ಮತ್ತು ಜೀವ ವಿಜ್ಞಾನದವರಿಗೆ 2 ದಿನಗಳ ತರಬೇತಿಯೊಂದಿಗೆ ತಮ್ಮ ಕಾಲೇಜಿನ ದೋಷಪೂರಿತ ವಿಶ್ಲೇಷಣಾತ್ಮಕ ಉಪಕರಣಗಳನ್ನು ಸರಿಪಡಿಸಲು ಅವಕಾಶವಿದೆ.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್. ರಾಜಗೋಪಾಲಾಚಾರ್ ಅವರ ಅಧ್ಯಕ್ಷತೆಯಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಕಾರ್ಯಾಗಾರ ಉದ್ಘಾಟಿಸಲಿದ್ದು, ಮುಂಬೈ ವಿ.ವಿ. ಇನ್ಸ್ಟ್ರೆಮೆಂಟೇಶನ್ ಸೆಂಟರ್ನ ನಿರ್ದೇಶಕ ಡಾ| ಬಿ.ಎಲ್. ಜಾಧವ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರನ್ನು ಕಾರ್ಯಾಗಾರದ ಸಂಯೋಜಕ ಡಾ| ಕೆ. ನಾರಾಯಣ ಪೂಜಾರಿ ಅವರಲ್ಲಿ ಆ. 31ರ ಒಳಗೆ ನೋಂದಾಯಿಸುವಂತೆ ಪ್ರಾಂಶುಪಾಲ ಡಾ| ಪಿ. ವೆಂಕಟ್ರಮಣ ಗೌಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.