ನವದೆಹಲಿ: ಭಾರತೀಯ ಪೌರತ್ವಕ್ಕಾಗಿ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ಸಾಕಷ್ಟು ಜನರು ಅರ್ಕಿ ಹಾಕಿದ್ದಾರೆ. ಇತ್ಯರ್ಥಕ್ಕೆ ಬಾಕಿ ಉಳಿದಿರುವ ಶೇಕಡಾ 70 ರಷ್ಟು ಅರ್ಜಿಗಳು ಪಾಕಿಸ್ಥಾನದಿಂದ ಬಂದವರಿಗೆ ಸೇರಿದೆ ಎಂದು ಕೇಂದ್ರ ಗೃಹ ಸಚಿವಾಲಯ ನೀಡಿರುವ ಅಂಕಿಅಂಶಗಳು ತಿಳಿಸಿವೆ.
ಪ್ರಸ್ತುತ ಪೌರತ್ವದ ಡೇಟಾ ಸೇರಿದಂತೆ ಭಾರತೀಯ ಪೌರತ್ವಕ್ಕಾಗಿ ಪ್ರಸ್ತುತ ಅರ್ಜಿದಾರರ ವಿವರಗಳ ಬಗ್ಗೆ ಸಂಸತ್ ಸದಸ್ಯ ಅಬ್ದುಲ್ ವಹಾಬ್ ಅವರು ಬುಧವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ಡಿಸೆಂಬರ್ 14, 2021 ರವರೆಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ 10,635 ಅರ್ಜಿದಾರರಲ್ಲಿ 7,306 ಪಾಕಿಸ್ಥಾನದಿಂದ ಬಂದವರು ಎಂದು ಹೇಳಿದ್ದಾರೆ.
ಅಫ್ಘಾನಿಸ್ಥಾನದಿಂದ 1,152 ಅರ್ಜಿಗಳು ಬಾಕಿ ಉಳಿದಿವೆ, ನಂತರ ಯಾವುದೇ ರಾಷ್ಟ್ರ ಇಲ್ಲದವರ 428, ಶ್ರೀಲಂಕಾ ಮತ್ತು ಯುಎಸ್ಎಯಿಂದ 223, ನೇಪಾಳದಿಂದ 189 ಮತ್ತು ಬಾಂಗ್ಲಾದೇಶದಿಂದ 161 ಅರ್ಜಿಗಳು ಬಾಕಿ ಉಳಿದಿವೆ ಎಂದು ಸಚಿವರು ಹೇಳಿದ್ದಾರೆ.
ಚೀನಾದಿಂದ 10 ಅರ್ಜಿದಾರರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಪೌರತ್ವವನ್ನು ನೀಡುವ ಅಧಿಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಇರುತ್ತದೆ. ವಿವರವಾದ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಂತರ ಅರ್ಜಿಯನ್ನು ಅನುಮೋದಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.