ಜಗತ್ತಿನ ವೈಜ್ಞಾನಿಕ ಮುನ್ನಡೆ ಎಷ್ಟೆಂದರೆ ಊಹೆಗೂ ನಿಲುಕದ್ದು. ಪ್ರತಿ ಕ್ಷಣವೂ ವಿಶ್ವದ ವೈಜ್ಞಾನಿಕ ಮುನ್ನಡೆಗೆ ಸಾಕ್ಷಿಯಾಗುತ್ತಿದೆ. ಈಗಾಗಲೇ ಬಾಹ್ಯಾಕಾಶಕ್ಕೆ ಪ್ರವಾಸವೂ ಆರಂಭಗೊಳ್ಳುವ ಹಂತದಲ್ಲಿದೆ. ವಿಶ್ವದ ಕ್ಷಣ ಕ್ಷಣದ ಮಾಹಿತಿ ವಿನಿಮಯದೊಂದಿಗೆ ಹೊಸ ಮನ್ವಂತರಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಆಗಸದಲ್ಲಿ ನಿನ್ನೆ ಕಂಡುಬಂದ ದೃಶ್ಯ ಅಚ್ಚರಿಯೊಂದಿಗೆ ಪ್ರಶ್ನೆಯೊಂದನ್ನು ಹುಟ್ಟುಹಾಕಿತ್ತು. ಅಕಾಶದಲ್ಲಿ ಹೇಗೆ ಸಾಲು ಸಾಲು ದೀಪಗಳು ಸೃಷ್ಠಿಯಾದವು. ಅವು ಹೇಗೆ ತಾನೆ ಚಲಿಸುತ್ತಿವೆ. ರಾಕೆಟ್ ಉಗುಳಿದ ಹೊಗೆಯ ಪ್ರತಿಫಲನವೇ? ಉಲ್ಕಾಪಾತವೇ ಹೀಗೆ ಹಲವು ಪ್ರಶ್ನೆಗಳ ಸರಮಾಲೆ. ಕೆಲವರು ಇದನ್ನು ಪ್ರಾಕೃತಿಕ ವಿಸ್ಮಯ ಎಂದು ಹೇಳಿದರೂ ಅದರಲ್ಲಿರುವ ವೈಜ್ಞಾನಿಕ ಅಂಶವನ್ನು ತಿಳಿಸಲು ಅಸಾಧ್ಯ ಎಂದರು.
ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪೆನಿ ಸರಣಿ ಉಪಗ್ರಹವನ್ನು ಡಿ. 18 ರಂದು ಕ್ಯಾಲಿಫೋರ್ನಿಯಾದಿಂದ ಉಡಾಯಿಸಿದೆ. ಹಲವು ಸರಣಿ ಉಪಗ್ರಹಗಳು ಇದಾಗಿದ್ದು, ಭೂಮಿಯ ಸುತ್ತ ಪರಿಭ್ರಮಿಸುತ್ತವೆ. ತನ್ನ ಕಕ್ಷೆಗೆ ತಲುಪುವ ಮುನ್ನ ಬರಿ ಕಣ್ಣಿಗೆ ಹಲವೆಡೆಗಳಲ್ಲಿ ಇವು ಕಾಣಿಸಿಕೊಂಡಿದೆ. ಉಡುಪಿ, ಉತ್ತರಕನ್ನಡ ಸಹಿತ ಕಾಸರಗೋಡಿನಲ್ಲೂ ಈ ಉಪಗ್ರಹಗಳ ಚಲನೆ ಬೆಳಕಿನ ದೀಪಗಳಂತೆ ಕಂಡಿದೆ. ವೇಗದ ಇಂಟರರ್ನೆಟ್ ಒದಗಿಸುವ ನಿಟ್ಟಿನಲ್ಲಿ ಈ ಸರಣಿ ಉಪಗ್ರಹ ಉಡಾಯಿಸಲಾಗಿದೆ ಎಂದು ಸ್ಪೇಸ್ ಎಕ್ಸ್ ವೆಬ್ ಸೈಟ್ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.