ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒನಲ್ಲಿ ಚಂದಾದಾರಿಕೆ ಸೇರ್ಪಡೆ ಅಧಿಕ ಆಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಈ ವರ್ಷದ ಅಕ್ಟೋಬರ್ನಲ್ಲಿ 12 ಲಕ್ಷ 73 ಸಾವಿರ ನಿವ್ವಳ ಚಂದಾದಾರರನ್ನು ಸೇರಿಸಿದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ನಂತರ ವೇತನದಾರರ ಸೇರ್ಪಡೆಯು ಅಧಿಕವಾಗುತ್ತಿದೆ ಎಂಬುವುದನ್ನು ಇದು ಸೂಚಿಸುತ್ತದೆ.
ಇಪಿಎಫ್ಒ ಪ್ರಕಾರ, ಹಿಂದಿನ ವರ್ಷದ ಅಕ್ಟೋಬರ್ನ 11.55 ಲಕ್ಷ ನಿವ್ವಳ ಚಂದಾದಾರರಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಹೋಲಿಕೆಯು ಈ ವರ್ಷದ ಅಕ್ಟೋಬರ್ನಲ್ಲಿ ನಿವ್ವಳ ವೇತನದಾರರ ಸೇರ್ಪಡೆಯಲ್ಲಿ ಸುಮಾರು 10.22 ಶೇಕಡಾ ಹೆಚ್ಚಳವನ್ನು ತೋರಿಸುತ್ತದೆ.
ಒಟ್ಟು 12 ಲಕ್ಷದ 73 ಸಾವಿರ ನಿವ್ವಳ ಚಂದಾದಾರರ ಪೈಕಿ 7 ಲಕ್ಷ 57 ಸಾವಿರ ಹೊಸ ಸದಸ್ಯರನ್ನು ಮೊದಲ ಬಾರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ-1952 ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ಇಪಿಎಫ್ಒ ಹೇಳಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಚಂದಾದಾರರ ಸಂಖ್ಯೆ ಹೆಚ್ಚುತ್ತಿರುವುದು ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬುದಕ್ಕೆ ಸೂಚಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.