ನವದೆಹಲಿ: ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ನ 2015-16ರ ಸಾಲಿನ ದ್ವೆಮಾಸಿಕ ಆರ್ಥಿಕ ಪರಾಮರ್ಶೆ ನೀತಿಯನ್ನು ಪ್ರಕಟಗೊಳಿಸಿದ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ.
ಇದರಿಂದ, ಹಿಂದಿನಂತೆಯೆ ರೆಪೊ ದರ 7.5 ರಷ್ಟು ಹಾಗೂ ನಗದು ಮೀಸಲು ಅನುಪಾತ ಶೇ 4ರಷ್ಟು ಮುಂದುವರಿಯಲಿದೆ. ಅಕಾಲಿಕ ಮಳೆಯು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂಬ ಮನ್ಸೂಚನೆಯ ಹಿನ್ನಲೆಯಲ್ಲಿ ಅವರು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ವಿಶ್ಲೇಷಿಸಲಾಗಿದೆ.
‘ಆರ್ಬಿಐ ಎರಡು ಬಾರಿ ಬಡ್ಡಿದರ ಇಳಿಸಿದ ಹಾಗೂ ಸಾಲದ ಬೇಡಿಕೆಯು ದುರ್ಬಲವಾಗಿದ್ದರೂ ಬ್ಯಾಂಕ್ಗಳು, ಬಡ್ಡಿದರ ಇಳಿಕೆ ಮಾಡಿಲ್ಲ. ಆರ್ಬಿಐ ಮಾಡಿದ ಇಳಿಕೆಯನ್ನು ಬ್ಯಾಂಕ್ಗಳು ಗ್ರಾಹಕರಿಗೆ ವರ್ಗಾಯಿಸಿದರೆ ಮತ್ತು ಅಕಾಲಿಕ ಮಳೆಯ ಪರಿಣಾಮದ ಬಗೆಗಿನ ಅಂಕಿಅಂಶಗಳು ದೊರೆತರೆ, ಹಣದುಬ್ಬರ ಏರಿಳಿತದ ಪ್ರಮಾಣ ಅರಿಯಲು ನೆರವಾಗಲಿದೆ. ಅಲ್ಲಿಯ ವರೆಗೂ ಆರ್ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ’ ಎಂದು ರಾಜನ್ ಸ್ಪಷ್ಟಪಡಿಸಿದ್ದಾರೆ.
ದೇಶದ ಒಟ್ಟಾರೆ ಉತ್ಪನ್ನದ(ಜಿಡಿಪಿ) ಬಗ್ಗೆ ಆಶಾದಾಯಕ ಮಾತುಗಳನ್ನಾಡಿರುವ ಆರ್ಬಿಐ, 2015-16ನೇ ಸಾಲಿನಲ್ಲಿ ಜಿಡಿಪಿ ಅಭಿವೃದ್ಧಿ ದರ 7.8ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.