ನವದೆಹಲಿ: ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಹೊಸ ವರದಿಯ ಪ್ರಕಾರ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಇಂಡಿಯನ್ ಆರ್ಡನೆನ್ಸ್ ಫ್ಯಾಕ್ಟರಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಈ ಮೂರು ಭಾರತೀಯ ಕಂಪನಿಗಳು 2020 ರಲ್ಲಿ ಸಂಯೋಜಿತ ಶಸ್ತ್ರಾಸ್ತ್ರ ಮಾರಾಟದಲ್ಲಿ ವಿಶ್ವದ ಅಗ್ರ 100 ಸಂಸ್ಥೆಗಳಲ್ಲಿ ಸೇರಿವೆ.
ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರವನ್ನು ಟ್ರ್ಯಾಕ್ ಮಾಡುತ್ತದೆ.
ಎಚ್ಎಎಲ್ ಮತ್ತು ಇಂಡಿಯನ್ ಆರ್ಡನೆನ್ಸ್ ಫ್ಯಾಟರಿಗಳು ಕ್ರಮವಾಗಿ $2.97 ಬಿಲಿಯನ್ ಮತ್ತು $1.9 ಬಿಲಿಯನ್ ಮೌಲ್ಯದ ಮಾರಾಟದೊಂದಿಗೆ ಶ್ರೇಯಾಂಕದಲ್ಲಿ 42ನೇ ಮತ್ತು 60ನೇ ಸ್ಥಾನಗಳನ್ನು ಪಡೆದುಕೊಂಡಿವೆ. BEL 2020 ರಲ್ಲಿ $1.63 ಬಿಲಿಯನ್ ಮೊತ್ತದ ಮಾರಾಟದೊಂದಿಗೆ 66 ನೇ ಸ್ಥಾನದನಲ್ಲಿದೆ.
2020 ರಲ್ಲಿ ಶಸ್ತ್ರಾಸ್ತ್ರಗಳ ಮಾರಾಟದ ಭಾರತೀಯ ಪಾಲು ಅಂತಾರಾಷ್ಟ್ರೀಯ ಮಟ್ಟದಲ್ಲಿ 1.2 ಪ್ರತಿಶತದಷ್ಟಿತ್ತು. ಮೂರು ಭಾರತೀಯ ಕಂಪನಿಗಳ ಒಟ್ಟು $6.5 ಬಿಲಿಯನ್ ಶಸ್ತ್ರಾಸ್ತ್ರಗಳ ಮಾರಾಟವು 2019 ಕ್ಕೆ ಹೋಲಿಸಿದರೆ 2020 ರಲ್ಲಿ 1.7 ಶೇಕಡಾ ಹೆಚ್ಚಾಗಿದೆ ಎಂದು ಮೂಲಗಳು ವರದಿ ಮಾಡಿವೆ.
“ಸಾಂಕ್ರಾಮಿಕ ರೋಗದ ಋಣಾತ್ಮಕ ಆರ್ಥಿಕ ಪರಿಣಾಮಗಳ ವಿರುದ್ಧ ಭಾರತೀಯ ಕಂಪನಿಗಳನ್ನು ರಕ್ಷಿಸಲು ದೇಶೀಯ ಸಂಗ್ರಹಣೆ ಸಹಾಯ ಮಾಡಿದೆ” ಎಂದು ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ವರದಿ ತಿಳಿಸಿದೆ.
2020 ರಲ್ಲಿ, ದೇಶೀಯ ಕಂಪನಿಗಳನ್ನು ಬೆಂಬಲಿಸಲು ಮತ್ತು ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ನೂರಕ್ಕೂ ಹೆಚ್ಚು ವಿವಿಧ ರೀತಿಯ ಮಿಲಿಟರಿ ಉಪಕರಣಗಳ ಆಮದುಗಳ ಮೇಲೆ ಹಂತ ಹಂತದ ನಿಷೇಧವನ್ನು ಘೋಷಿಸಿತು.
ಅಗ್ರ 100 ಕಂಪನಿಗಳ ಸಂಯೋಜಿತ ಶಸ್ತ್ರಾಸ್ತ್ರ ಮಾರಾಟದಲ್ಲಿ ಅಮೆರಿಕ ಮತ್ತು ಚೀನೀ ಕಂಪನಿಗಳು ಕ್ರಮವಾಗಿ 54 ಪ್ರತಿಶತ ಮತ್ತು 13 ಪ್ರತಿಶತವನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.