
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಆರು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ ಮತ್ತು ಇನ್ನೂ ಐದು ಹೊಸ ವಿಮಾನ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆರು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳಲ್ಲಿ ಕೇರಳದ ಕಣ್ಣೂರು ವಿಮಾನ ನಿಲ್ದಾಣ (2018), ಸಿಕ್ಕಿಂನ ಪಾಕ್ಯೊಂಗ್ ವಿಮಾನ ನಿಲ್ದಾಣ (2018), ಕರ್ನಾಟಕದ ಕಲಬುರಗಿ ವಿಮಾನ ನಿಲ್ದಾಣ (2019), ಆಂಧ್ರಪ್ರದೇಶದ ಕರ್ನೂಲ್ ವಿಮಾನ ನಿಲ್ದಾಣ (2021), ಮಹಾರಾಷ್ಟ್ರದ ಸಿಂಧುದುರ್ಗ ವಿಮಾನ ನಿಲ್ದಾಣ (2021) ಮತ್ತು ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣ (2021)ಗಳು ಸೇರಿವೆ.
ಇದಲ್ಲದೆ, ಮಹಾರಾಷ್ಟ್ರದ ನವಿ ಮುಂಬೈ, ಗೋವಾದ ಮೋಪಾ, ರಾಜ್ಕೋಟ್ನ ಹಿರಾಸರ್, ಉತ್ತರ ಪ್ರದೇಶದ ಜೆವಾರ್ (ನೋಯ್ಡಾ) ಮತ್ತು ಅರುಣಾಚಲ ಪ್ರದೇಶದ ಇಟಾನಗರದ ಹೊಲೊಂಗಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಅಲ್ಲದೆ, ಕರ್ನಾಟಕದಲ್ಲಿ ಬಿಜಾಪುರ ವಿಮಾನ ನಿಲ್ದಾಣ, ಹಾಸನ ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ, ಪುದುಚೇರಿಯ ಕಾರೈಕಲ್ ವಿಮಾನ ನಿಲ್ದಾಣ, ಮಧ್ಯಪ್ರದೇಶದ ದಾತಿಯಾ ವಿಮಾನ ನಿಲ್ದಾಣ, ಗುಜರಾತ್ನ ಧೋಲೇರಾ ವಿಮಾನ ನಿಲ್ದಾಣ, ದಗದರ್ತಿ ವಿಮಾನ ನಿಲ್ದಾಣ ಮತ್ತು ಆಂಧ್ರಪ್ರದೇಶದ ಭೋಗಾಪುರಂ ವಿಮಾನ ನಿಲ್ದಾಣಗಳಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.
ಗುರುವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಡಾ ವಿ ಕೆ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
“ಹೆಚ್ಚುವರಿಯಾಗಿ, ಭಾರತ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಕಳೆದ 3 ವರ್ಷಗಳಲ್ಲಿ ಒಟ್ಟು 42 ವಿಮಾನ ನಿಲ್ದಾಣಗಳು/ಏರ್ಸ್ಟ್ರಿಪ್ಗಳನ್ನು ಕಾರ್ಯಗತಗೊಳಿಸಲಾಗಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
“ವಿಮಾನ ನಿಲ್ದಾಣ ಯೋಜನೆಗಳ ಅನುಷ್ಠಾನ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಣೆಗಾರಿಕೆಯು ಸಂಬಂಧಿಸಿದ ವಿಮಾನ ನಿಲ್ದಾಣ ಡೆವಲಪರ್ನ ಮೇಲಿದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


