
ನವದೆಹಲಿ: ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ರಷ್ಯಾದೊಂದಿಗಿನ ಮಿಲಿಟರಿ ಬಾಂಧವ್ಯಕ್ಕೆ ಪ್ರಮುಖ ಉತ್ತೇಜನವೆಂಬಂತೆ, ಉಭಯ ದೇಶಗಳು ಸೋಮವಾರ 7.5 ಲಕ್ಷ AK-203 ಆಕ್ರಮಣಕಾರಿ ರೈಫಲ್ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಲಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಮುದ್ರೆ ಬೀಳಲಿದೆ. ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಅಂತಿಮ ಅನುಮೋದನೆ ಸೇರಿದಂತೆ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದವು 5,000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಮತ್ತು ಭಾರತೀಯ ಸೇನೆಯು ಸ್ವಾಧೀನಪಡಿಸಿಕೊಳ್ಳಲಿರುವ 7.5 ಲಕ್ಷ AK-203 ಅಸಾಲ್ಟ್ ರೈಫಲ್ಗಳಲ್ಲಿ, ಆರಂಭಿಕ 7,00,000 ರೈಫಲಲ್ಗಳು ರಷ್ಯಾ ನಿರ್ಮಿತವಾಗಿರಲಿದೆ. ಅದರ ನಂತರ, ತಂತ್ರಜ್ಞಾನದ ವರ್ಗಾವಣೆಯೊಂದಿಗೆ ಭಾರತದಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಇತರ ರೈಫಲ್ಗಳನ್ನು ಉತ್ಪಾದಿಸಲಾಗುತ್ತದೆ. ಉತ್ಪಾದನಾ ಪ್ರಕ್ರಿಯೆ ಆರಂಭವಾದ 32 ತಿಂಗಳ ನಂತರ ರೈಫಲ್ಗಳನ್ನು ಸೇನೆಗೆ ತಲುಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವಿನ ಸಭೆಯ ಸಂದರ್ಭದಲ್ಲಿ ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಪ್ರಸ್ತುತಪಡಿಸುವ ಸಾಧ್ಯತೆಯಿದೆ, ಇದು ಈಗಾಗಲೇ ಹಂತಗಳಲ್ಲಿ ಭಾರತಕ್ಕೆ ಆಗಮಿಸಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿತರಣೆಗಳು ಪ್ರಾರಂಭವಾಗಿವೆ.
ದುಬೈ ಏರ್ಶೋ 2021 ರ ಸಂದರ್ಭದಲ್ಲಿ, ರಷ್ಯಾದ ಸರ್ಕಾರಿ ಶಸ್ತ್ರಾಸ್ತ್ರ ಮಾರಾಟಗಾರ ರೊಸೊಬೊರೊನೆಕ್ಸ್ಪೋರ್ಟ್ನ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೇವ್ ಅವರು ಎಸ್ -400 ಸಿಸ್ಟಮ್ಗಳನ್ನು ನಿರ್ವಹಿಸಲು ರಷ್ಯಾ ಭಾರತೀಯ ತಜ್ಞರಿಗೆ ತರಬೇತಿ ನೀಡಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


