
ನವದೆಹಲಿ: ಭಾರತದ 12 ಪ್ರಮುಖ ಬಂದರುಗಳ ಸರಕು ನಿರ್ವಹಣೆ ಸಾಮರ್ಥ್ಯವು 2013-14 ರಲ್ಲಿ ಇದ್ದ ವಾರ್ಷಿಕ 800.52 ಮಿಲಿಯನ್ ಟನ್ ಗಳಿಂದ 2020-21 ರಲ್ಲಿ 1,560.61 ಮಿಲಿಯನ್ ಟನ್ಗಳಿಗೆ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ, 200 ಪ್ರಮುಖವಲ್ಲದ ಬಂದರುಗಳ ವಾರ್ಷಿಕ ಸರಕು ನಿರ್ವಹಣೆ ಸಾಮರ್ಥ್ಯವು 2013-14 ರಲ್ಲಿ ಇದ್ದ 599.47 ಮಿಲಿಯನ್ ಟನ್ಗಳಿಂದ 2020-21 ರಲ್ಲಿ 1,002.24 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ.
ಹೀಗೆ ಎಲ್ಲಾ ಭಾರತೀಯ ಬಂದರುಗಳ ಒಟ್ಟು ಸಾಮರ್ಥ್ಯವು 2013-14 ರಲ್ಲಿ ಇದ್ದ 1,399.99 ವಾರ್ಷಿಕ ಮಿಲಿಯನ್ ಟನ್ಗಳಿಂದ 2020-21 ರಲ್ಲಿ 2,562.85 ವಾರ್ಷಿಕ ಮಿಲಿಯನ್ ಟನ್ಗೆ ಏರಿಕೆಯಾಗಿದೆ. ಅಂದರೆ ದ್ವಿಗುಣಗೊಂಡಿದೆ.
ಈ ಮಾಹಿತಿಯನ್ನು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
“ಪ್ರಮುಖ ಬಂದರುಗಳಿಗೆ ಸಂಬಂಧಿಸಿದಂತೆ, 2014 ರ ನಂತರ ಯಾವುದೇ ಹೊಸ ಪ್ರಮುಖ ಬಂದರುಗಳನ್ನು ನಿರ್ಮಿಸಲಾಗಿಲ್ಲ. ಪ್ರಮುಖ ಬಂದರುಗಳಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಉನ್ನತೀಕರಣವು ನಿರಂತರ ಪ್ರಕ್ರಿಯೆಯಾಗಿದೆ. ಪ್ರಮುಖವಲ್ಲದ ಬಂದರುಗಳು ಆಯಾ ರಾಜ್ಯ ಕಡಲ ಮಂಡಳಿಗಳು ಅಥವಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿವೆ” ಎಂದಿದ್ದಾರೆ.
ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಪ್ರಮುಖ ಬಂದರುಗಳು ಗಳಿಸಿದ ಒಟ್ಟು ನಿರ್ವಹಣಾ ಆದಾಯವು ಏರಿಕೆ ಕಂಡಿದೆ. 2020-21 ರಲ್ಲಿ ಒಟ್ಟು ಕಾರ್ಯಾಚರಣೆಯ ಆದಾಯವು 14,688 ಕೋಟಿ ರೂ ಆಗಿದೆ ಮತ್ತು ಇದು 2013-14 ರಲ್ಲಿ 9,162 ಕೋಟಿ ರೂ ಆಗಿತ್ತು.
ಅಲ್ಲದೆ, ಪ್ರಮುಖ ಬಂದರುಗಳ ಒಟ್ಟು ಆದಾಯವು 2013-14ರಲ್ಲಿ ರೂ.11,171 ಕೋಟಿಯಿಂದ 2020-21ರ ಅವಧಿಯಲ್ಲಿ ರೂ.16,419 ಕೋಟಿಗೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


