
ನವದೆಹಲಿ: ಮಧ್ಯಮದಿಂದ ತೀವ್ರ ಸ್ವರೂಪದ ಕೋವಿಡ್ ರೋಗದ ವಿರುದ್ಧ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿತ್ವ ಶೇ.81 ರಷ್ಟಿದೆ ಎಂದು ಜರ್ನಲ್ ʼದಿ ಲ್ಯಾನ್ಸೆಟ್ʼ ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಈ ಅಧ್ಯಯನವು ನೈಜ ಪ್ರಪಂಚದ ಲಸಿಕೆ ಪರಿಣಾಮಕಾರಿತ್ವ ಮತ್ತು ವ್ಯಾಕ್ಸಿನೇಷನ್ಗೆ ರೋಗನಿರೋಧಕ ಪ್ರತಿಕ್ರಿಯೆಯ ಕುರಿತು ಸಮಗ್ರ ಡೇಟಾವನ್ನು ಒದಗಿಸುತ್ತದೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ದೃಢಪಡಿಸಿದ SARS-CoV-2 ಸೋಂಕಿನ 2, 379 ಪ್ರಕರಣಗಳು ಮತ್ತು 1,981 ನಿಯಂತ್ರಣಗಳ ನಡುವಿನ ಹೋಲಿಕೆಯನ್ನು ಒಳಗೊಂಡಿರುವ ಅಧ್ಯಯನದ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಲಸಿಕೆ ಪರಿಣಾಮಕಾರಿತ್ವವು 63 ಪ್ರತಿಶತದಷ್ಟು ಕಂಡುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಉ ಅಂಕಿಅಂಶಗಳ ಪ್ರಕಾರ, SARS-CoV-2 ಪ್ರಪಂಚದಾದ್ಯಂತ ಐದು ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದ್ದು, ಇನ್ನೂರು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


