ನವದೆಹಲಿ: ಕೊವ್ಯಾಕ್ಸ್ ಸೌಲಭ್ಯದ ಅಡಿಯಲ್ಲಿ ಭಾರತವು ಇದುವರೆಗೆ 25 ಮಿಲಿಯನ್ ಡೋಸ್ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಆಫ್ರಿಕಾದ 41 ದೇಶಗಳಿಗೆ ಪೂರೈಸಿದೆ, ಇದರಲ್ಲಿ 16 ದೇಶಗಳಿಗೆ ಸುಮಾರು ಒಂದು ಮಿಲಿಯನ್ ಡೋಸ್ಗಳು ಮತ್ತು 33 ದೇಶಗಳಿಗೆ 16 ಮಿಲಿಯನ್ ಡೋಸ್ಗಳನ್ನು ನೀಡಿದೆ .
ಅನೇಕ ಆಫ್ರಿಕನ್ ದೇಶಗಳಿಗೆ ಕೊರೋನಾ ರೂಪಾಂತರದ ಒಮಿಕ್ರಾನ್ ಭೀತಿ ಉಂಟಾಗಿದೆ. ಜಾಗತಿಕ ಮಟ್ಟದಲ್ಲೂ ಇದು ಭಿತಿ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, “ನಾವು ಕೋವಿಡ್-19ನ ಹೊಸ ರೂಪಾಂತರ ಒಮಿಕ್ರಾನ್ ಹೊರಹೊಮ್ಮುವಿಕೆಯನ್ನು ಗಮನಿಸಿದ್ದೇವೆ. ಒಮಿಕ್ರಾನ್ ರೂಪಾಂತರದಿಂದ ಇದುವರೆಗೆ ಪ್ರಭಾವಿತವಾಗಿರುವ ದೇಶಗಳೊಂದಿಗೆ, ವಿಶೇಷವಾಗಿ ಆಫ್ರಿಕಾದೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ” ಎಂದು ತಿಳಿಸಿದೆ.
‘ಮೇಡ್ ಇನ್ ಇಂಡಿಯಾ’ ಲಸಿಕೆಗಳ ಸರಬರಾಜು ಸೇರಿದಂತೆ ಓಮಿಕ್ರಾನ್ ರೂಪಾಂತರದಿಂದ ಬಾಧಿತವಾಗಿರುವ ಆಫ್ರಿಕಾ ದೇಶಗಳನ್ನು ಬೆಂಬಲಿಸಲು ಭಾರತ ಸರ್ಕಾರ ಸಿದ್ಧವಾಗಿದೆ ಎಂದಿದೆ.
“ಸರಬರಾಜನ್ನು ಕೊವ್ಯಾಕ್ಸ್ ಮೂಲಕ ಅಥವಾ ದ್ವಿಪಕ್ಷೀಯವಾಗಿ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ, ಮಲಾವಿ, ಇಥಿಯೋಪಿಯಾ, ಜಾಂಬಿಯಾ, ಮೊಜಾಂಬಿಕ್, ಗಿನಿಯಾ ಮತ್ತು ಲೆಸೊಥೊ ಸೇರಿದಂತೆ ಆಫ್ರಿಕನ್ ದೇಶಗಳಿಗೆ ಕೋವಿಶೀಲ್ಡ್ ಲಸಿಕೆಗಳ ಪೂರೈಕೆಗಾಗಿ ಕೊವ್ಯಾಕ್ಸ್ ನಿಂದ ಇದುವರೆಗೆ ಮಾಡಿದ ಎಲ್ಲಾ ಆದೇಶಗಳನ್ನು ಸರ್ಕಾರವು ತೆರವುಗೊಳಿಸಿದೆ” ಎಂದಿದೆ.
ಭಾರತ ಸರ್ಕಾರವು ಬೋಟ್ಸ್ವಾನಾಗೆ ಕೊವ್ಯಾಕ್ಸಿನ್ನ ಸರಬರಾಜನ್ನು ಸಹ ಅನುಮೋದಿಸಿದೆ. ದ್ವಿಪಕ್ಷೀಯವಾಗಿ ಅಥವಾ ಕೊವ್ಯಾಕ್ಸ್ ಮೂಲಕ ಯೋಜಿಸಲಾದ ಯಾವುದೇ ಹೊಸ ಅವಶ್ಯಕತೆಗಳನ್ನು ತ್ವರಿತವಾಗಿ ಪರಿಗಣಿಸಲಾಗುತ್ತದೆ ಎಂದಿದೆ.
ಅಗತ್ಯವಿದ್ದಷ್ಟು ಜೀವರಕ್ಷಕ ಔಷಧಗಳು, ಪರೀಕ್ಷಾ ಕಿಟ್ಗಳು, ಗ್ಲೌಸ್, ಪಿಪಿಇ ಕಿಟ್ಗಳು ಮತ್ತು ವೆಂಟಿಲೇಟರ್ಗಳಂತಹ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಭಾರತ ಸಿದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.