ನವದೆಹಲಿ: ಪಾವತಿಗಳ ದೈತ್ಯ ವೀಸಾ ಭಾರತದ ಅಪ್ಪಟ ದೇಶೀಯ ಪಾವತಿ ಪ್ರತಿಸ್ಪರ್ಧಿಯಾದ ರುಪೇ ಬೆಳವಣಿಗೆಯಿಂದ ತತ್ತರಿಸಿ ಹೋಗುತ್ತಿದೆ. ಭಾರತದ ರುಪೇಗೆ ಸಿಗುತ್ತಿರುವ ಅನೌಪಚಾರಿಕ ಮತ್ತು ಔಪಚಾರಿಕ ಪ್ರಚಾರವು ಪ್ರಮುಖ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ವೀಸಾ ಯುಎಸ್ ಸರ್ಕಾರಕ್ಕೆ ದೂರು ನೀಡಿದೆ ಎಂದು ವರದಿಯಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಕ್ಯಾಥರೀನ್ ತೈ ಮತ್ತು ವೀಸಾದ ಸಿಇಒ ಆಲ್ಫ್ರೆಡ್ ಕೆಲ್ಲಿ ಸೇರಿದಂತೆ ಇತರ ಕಾರ್ಯನಿರ್ವಾಹಕರ ನಡುವಿನ ಸಭೆಯಲ್ಲಿ ಕಂಪನಿಯು ರುಪೇ ಬೆಳವಣಿಗೆ ಕುರಿತು ಕಳವಳ ವ್ಯಕ್ತಪಡಿಸಿದೆ.
ಭಾರತೀಯ ಬಹುರಾಷ್ಟ್ರೀಯ ಹಣಕಾಸು ಸೇವೆಗಳು ಮತ್ತು ಪಾವತಿ ಸೇವಾ ವ್ಯವಸ್ಥೆಯಾದ RuPay ಅನ್ನು 2012 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ರೂಪಿಸಿತು ಮತ್ತು ಪ್ರಾರಂಭಿಸಿತು. ಇದು ವೇಗವಾಗಿ ಬೆಳೆಯುತ್ತಿರುವ ವೀಸಾ ಮತ್ತು ಮಾಸ್ಟರ್ಕಾರ್ಡ್ಗೆ ಸವಾಲನ್ನು ಎಸೆದಿದೆ.
ಭಾರತದಲ್ಲಿ ಕೇಂದ್ರ ಸರ್ಕಾರ ರುಪೇ ಕಾರ್ಡ್ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದು ತನ್ನ ವಹಿವಾಟಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದು ವಿಶ್ವದ ಅತಿದೊಡ್ಡ ಪೇಮೆಂಟ್ ಗೇಟ್ ವೇ ಕಂಪನಿ ವೀಸಾ ಕಳವಳ ವ್ಯಕ್ತಪಡಿಸಿದೆ.
ಭಾರತದಲ್ಲಿ ಈಗ ರುಪೇ ಕಾರ್ಡ್ ಹೆಚ್ಚು ಬಳಕೆಯಾಗುತ್ತಿದೆ. ಬಹುತೇಕ ಬ್ಯಾಂಕುಗಳು ರೂಪೇ ಕಾರ್ಡ್ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದು ಸ್ವದೇಶಿ ಆಗಿರುವುದರಿಂದ ಜನರು ಇದನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ವೀಸಾ, ಮಾಸ್ಟರ್ ಕಾರ್ಡ್ ಗಳ ವಹಿವಾಟು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇಕಡಾ 63ರಷ್ಟು ಪಾಲನ್ನು ರುಪೇ ಕಾರ್ಡ್ ಹೊಂದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.